spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಧೋನಿ ವಿದಾಯ ಪ್ರಕಟಿಸಿದ ಬೆನ್ನಲ್ಲೇ ಕ್ರಿಕೆಟ್‌ನಿಂದಲೇ ದೂರ ಸರಿಯಲು ನಿರ್ಧರಿಸಿದ ಪಾಕ್ ಅಭಿಮಾನಿ!

- Advertisement -Nitte

ನವದೆಹಲಿ:  ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ ಬೆನ್ನಲ್ಲೇ ಅವರ ಪಾಕಿಸ್ತಾನದ ಅಭಿಮಾನಿಯಂತೂ ಕ್ರಿಕೆಟ್‌ನಿಂದಲೇ ದೂರ ಸರಿಯಲು ನಿರ್ಧರಿಸಿದ್ದಾರೆ.
ಹೌದು, ಕರಾಚಿ ಮೂಲದ ಮೊಹಮದ್ ಬಶೀರ್ ಬೊಜೈ ಎಂಬವರು ‘ಚಾಚಾ ಚಿಕಾಗೋ’ ಎಂದೇ ಕ್ರಿಕೆಟ್ ವಲಯದಲ್ಲಿ ಗುರುತಿಸಿಕೊಂಡಿರುವ ಕಟ್ಟಾ ಅಭಿಮಾನಿ.
ಕೈಯಲ್ಲಿ ಭಾರತ-ಪಾಕಿಸ್ಥಾನ ದೇಶಗಳ ಜಂಟಿ ಧ್ವಜ, ಪಾಕಿಸ್ಥಾನದ ಹಸಿರು ನಿಲುವಂಗಿ, ಅದರ ಮೇಲೆ ಧೋನಿ ಚಿತ್ರ. ಜಗತ್ತಿನ ಯಾವ ಮೂಲೆಯಲ್ಲೂ ಭಾರತ-ಪಾಕಿಸ್ಥಾನ ಪಂದ್ಯ ನಡೆಯಲಿ, ಇಳಿ ವಯಸ್ಸಿನ ಈ ಅಭಿಮಾನಿ ಹಾಜರ್‌.
ಇವರಿಗೆ ಪಂದ್ಯದ ಟಿಕೆಟ್‌ ವ್ಯವಸ್ಥೆಯನ್ನು ಧೋನಿಯೇ ಮಾಡಿಕೊಡುತ್ತಿದ್ದರು.
“ಧೋನಿ ನಿವೃತ್ತರಾದರು. ನಾನು ಕೂಡ ಇನ್ನು ನಿವೃತ್ತ. ಧೋನಿ ಇಲ್ಲದ ಪಂದ್ಯಗಳಲ್ಲಿ ಇನ್ನು ನನ್ನನ್ನು ಕಾಣಲು ಸಾಧ್ಯವಿಲ್ಲ. ನಾನು ಧೋನಿಯವರನ್ನು ಅತಿಯಾಗಿ ಗೌರವಿಸುತ್ತೇನೆ, ಅವರೂ ನನ್ನನ್ನು ಪ್ರೀತಿಸುತ್ತಾರೆ. ಪ್ರೀತಿಯ ಈ ನಂಟು, ಆತ್ಮೀಯತೆಯ ಬೆಸುಗೆ ಮುಂದೆಯೂ ಇರುತ್ತದೆ…’ ಎಂದು ಬಶೀರ್‌ ಶಿಕಾಗೊದಿಂದ ದೂರವಾಣಿ ಮೂಲಕ ಪಿಟಿಐ ಜತೆ ಹೇಳಿಕೊಂಡಿದ್ದಾರೆ.
‘ಎಲ್ಲ ಶ್ರೇಷ್ಠ ಆಟಗಾರರೂ ಒಂದಲ್ಲ ಒಂದು ದಿನ ನಿವೃತ್ತಿಯಾಗಲೇಬೇಕು. ಆದರೆ ಧೋನಿ ಅವರ ನಿವೃತ್ತಿ ನನಗೆ ತೀವ್ರ ಬೇಸರ ತಂದಿದೆ. ಅವರು ಸಾಕಷ್ಟು ಸ್ಮರಣೀಯ ನೆನಪುಗಳನ್ನು ನೀಡಿದ್ದಾರೆ. ಅವರಿಗೆ ಭರ್ಜರಿ ಬೀಳ್ಕೊಡುಗೆ ಸಿಗಬೇಕಾಗಿತ್ತು’ ಎಂದು 65 ವರ್ಷದ ಮೊಹಮದ್ ಬಶೀರ್ ಬೊಜೈ ಹೇಳಿದ್ದಾರೆ.
2011ರ ವಿಶ್ವಕಪ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯದ ಬಳಿಕ ಧೋನಿ-ಬಶೀರ್ ನಡುವೆ ಬಾಂಧವ್ಯ ಬೆಳೆದಿತ್ತು. ಮೊಹಾಲಿಯಲ್ಲಿ ನಡೆದ ಪಂದ್ಯದ ಟಿಕೆಟ್ ಸಿಗದೆ ಬಶೀರ್ ಪರದಾಡುತ್ತಿದ್ದಾಗ, ಧೋನಿ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು.
ವಿಶ್ವದೆಲ್ಲೆಡೆ ಎಲ್ಲೇ ಭಾರತ-ಪಾಕಿಸ್ತಾನ ಪಂದ್ಯ ನಡೆದರೂ ಇವರು ಹಾಜರಾಗುತ್ತಾರೆ. ಆದರೆ ಪಂದ್ಯದ ವೇಳೆ ಧೋನಿಯನ್ನು ಬೆಂಬಲಿಸಿದ್ದಕ್ಕಾಗಿ ಕೆಲ ಸಂದರ್ಭಗಳಲ್ಲಿ ಪಾಕ್ ಅಭಿಮಾನಿಗಳಿಂದ ನಿಂದನೆಗೂ ಒಳಗಾಗಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss