Monday, August 8, 2022

Latest Posts

ನಂಜನಗೂಡಿನಲ್ಲಿ ಮತ್ತೆ ಕೊರೋನಾ ಹಬ್ಬಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿ ಬಂಧನ

ಮೈಸೂರು: ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕು ಹಬ್ಬಿರುವುದಾಗಿ ಸಾಮಾಜಿಕ ಜಾಣ ತಾಣವಾದ ಫೇಸ್‌ಬುಕ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಯೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡಿನ ಎಕ್ಸ್ಟ್ಸ್ಯಾಷನ್ ಬಡಾವಣೆಯ ಪ್ರಜ್ವಲ್ ಕಶ್ಯಪ್ ಬಂಧಿತ ಆರೋಪಿ. ಈತ ‘ನಂಜನಗೂಡು ಸಮಾಚಾರ’ ಎಂಬ ಹೆಸರಲ್ಲಿ ಫೇಸ್‌ಬುಕ್ ಮೂಲಕ ನಂಜನಗೂಡಿನ ಐವರಿಗೆ ಕೊರೋನಾ ಸೋಂಕು ಇದೆ ಎಂದು ಸುಳ್ಳು ಮಾಹಿತಿಯನ್ನು ಹಬ್ಬಿಸಿದ್ದ. ಇದನ್ನು ನೋಡಿ ಬಡಾವಣೆಯ ಕಾರ್ಮಿಕರು ದೂರು ನೀಡಿದ್ದು, ಪ್ರಜ್ವಲ್ ಕಶ್ಯಪ್‌ನನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದಿಂದ ಬಂದ ೧೯ ಮಂದಿ ಪೈಕಿ ಐವರಿಗೆ ಕೊರೊನಾ ಸೋಂಕು ಧೃಢವಾಗಿತ್ತು. ಐವರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಐವರೂ ಸಹ ಮೂಲತಃ ನಂಜನಗೂಡಿನ ನಿವಾಸಿಗಳೇ ಆಗಿದ್ದರೂ, ಇವರು ನಂಜನಗೂಡಿಗೆ ಬಂದಿರಲಿಲ್ಲ. ಆದರೆ, ನಂಜನಗೂಡಿನ ನಾಲ್ಕು ಬಡಾವಣೆಗಳ ಹೆಸರನ್ನ ಉಲ್ಲೇಖಿಸಿ ಪಾಸಿಟಿವ್ ಪತ್ತೆ ಎಂದು ಪ್ರಜ್ವಲ್ ಕಶ್ಯಪ್ ಪೋಸ್ಟ್ ಮಾಡಿದ್ದ. ಇದರಿಂದ ನಾಲ್ಕು ಬಡಾವಣೆಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಲು ಫ್ಯಾಕ್ಟರಿ ನಿರಾಕರಿಸಿದೆ. ಇದರಿಂದ ಬೇಸತ್ತು ಶಂಕರಪುರ ಬಡಾವಣೆ ನಿವಾಸಿಗಳು ನಂಜನಗೂಡಿನ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಪ್ಪು ಮಾಹಿತಿ ನೀಡಿ ನಾಲ್ಕು ಬಡಾವಣೆ ನಿವಾಸಿಗಳ ಆತಂಕಕ್ಕೆ ಕಾರಣವಾದ ಪ್ರಜ್ವಲ್ ಕಶ್ಯಪ್‌ನ್ನು ಬಂಧಿಸಿರುವ ನಂಜನಗೂಡು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss