Tuesday, August 9, 2022

Latest Posts

ನಂದಿನಿ ಉತ್ಪನ್ನಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚು: ಹಾಲು ಒಕ್ಕೂಟದ ನಿರ್ದೇಶಕ ಶಿವಪ್ಪ

ರಾಮನಗರ:ನಂದಿನಿ ಉತ್ಪನ್ನಗಳಿಗೆ ವಿದೇಶಗಳಲ್ಲಿಯೂ ಬೇಡಿಕೆ ಇದೆ ಎಂದು ಮಂಡ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಶಿವಪ್ಪ ತಿಳಿಸಿದರು.

ಅವರು ನಗರದ ಹೊರವಲಯದ ಚಿಕ್ಕಮಳೂರು ಬಳಿ ಅಮೋಘ ಬೇಕರಿಯ ಬಳಿ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಆಶ್ರಯದ ನಂದಿನಿ ಉತ್ಪನ್ನಗಳ ಸ್ಟಾಲ್ ಉದ್ಘಾಟನೆ ಹಾಗೂ ಉತ್ಪನ್ನಗಳ ಪ್ರದೇಶದಲ್ಲಿ ಸ್ಟಾಲ್ ಉದ್ಘಾಟನೆ ಮಾಡಿ ಮಾತನಾಡಿದರು.
ಗ್ರಾಹಕರಿಗೆ ಆರೋಗ್ಯಕರವಾದ ಗುಣಮಟ್ಟದ ಸಿಹಿ ತಿನಿಸುಗಳನ್ನು ನಂದಿನಿ ಉತ್ಪನ್ನಗಳಿಗೆ ಭಾರೀ ಬೇಡಿಕೆಯಾಗಿದೆ. ಮಂಡ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟವು ನಂದಿನಿ ಉತ್ಪನ್ನಗಳ ಬೇಡಿಕೆಗೆ ಅನುಗುಣವಾಗಿ ಕರ್ತವ್ಯಪಾಲನೆ ಮಾಡುತ್ತಿದೆ ಎಂದರು.

ಬೆ0ಗಳೂರು ಹಾಲು ಒಕ್ಕೂಟದ ನಿರ್ದೇಶಕ ಹೆಚ್.ಸಿ. ಜಯಮುತ್ತು, ನಂದಿನಿ ಉತ್ಪನ್ನಗಳ ಪ್ರದರ್ಶನ ಮಾಡುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿ, ಹೈನುಗಾರಿಕೆಯನ್ನು ಅವಲಂಬಿಸಿರುವ ಮಂಡ್ಯ ರಾಮನಗರ ಬೆಂಗಳೂರು ಇತರೆ ಜಿಲ್ಲೆಗಳಲ್ಲಿನ ಕುಟುಂಬಗಳು ಆರ್ಥಿಕವಾಗಿ ಚೇತರಿಕೆಗೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಹೈನುಗಾರಿಕೆಯಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪ ಮಾತ್ರ ಚಾಲನೆಯಲ್ಲಿದ್ದು, ಇಂದು ಹಾಲಿನಿಂದ ಹಲವಾರು ರೀತಿಯ ಆರೋಗ್ಯಕರ ಉತ್ಪನ್ನಗಳನ್ನು ತಯಾರಿ ಮಾಡಿ ಮಾರುಕಟ್ಟೆಗೆ ಬಿಟ್ಟಿರುವುದರಿಂದ ಗ್ರಾಹಕರು ನಂದಿನಿ ಉತ್ಪನ್ನಗಳ ಕಡೆಗಮನ ನೀಡುವಂತೆ ಮಾಡಿದೆ ಎಂದರು.
ಬೆAಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರಾರಂಭವಾಗುತ್ತಿರುವ ನಂದಿನಿ ಉತ್ಪನ್ನಗಳ ಸ್ಟಾಲ್ ಹೆಚ್ಚು ಗ್ರಾಹಕರನ್ನು ಆಕರ್ಷಣೆ ಮಾಡಲಿ ಎಂದು ಅಮೋಘ ಬೇಕರಿ ಹಾಗೂ ನಂದಿನಿ ಸ್ಟಾಲ್ ಮಾಲೀಕ ಮಳೂರು ಕುಮಾರ್‌ಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ಹರೀಶ್‌ಕುಮಾರ್, ಉಪ ವ್ಯವಸ್ಥಾಪಕ ಅಶೋಕ್ ಮೆಹತ್, ಸಹಾಯಕ ಯವಸ್ಥಾಪಕ ಸಾಗರ್, ಮಾರುಕಟ್ಟೆ ಅಧಿಕಾರಿ ಮಹಮದ್ ಅವಾಧ್, ನಗರಸಭೆ ಮಾಜಿ ಉಪಾಧ್ಯಕ್ಷ ಮುದ್ದುಕೃಷ್ಣ, ಮುಖಂಡರುಗಳಾದ ಬೈ ಶ್ರೀನಿವಾಸ್, ಮಳೂರು ಕುಮಾರ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss