Sunday, September 25, 2022

Latest Posts

ನಕಲಿ ಪಾಸ್ ಪೋರ್ಟ್ ಬಳಸಿದ ಬ್ರೆಜಿಲ್ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಬಂಧನ

ಅಸುನ್ಕಿಯಾನ್ ( ಪರಗ್ವೆ): ನಕಲಿ ಪಾಸ್ ಪೋರ್ಟ್ ಬಳಸಿ ಪಾರಗ್ವೆ ರಾಷ್ಟ್ರಕ್ಕೆ ತೆರಳಿದ್ದ ಬ್ರೆಜಿಲ್ ಫುಟ್ಬಾಲ್ ದಂತಕತೆ ರೊನಾಲ್ಡಿನೊ ಮತ್ತು ಅವರ ಸಹೋದರ ರಾಬರ್ಟೊ ಅಸಿಸ್ ಬುಧವಾರ ಬಂಧನಕ್ಕೆ ಒಳಗಾಗಿದ್ದಾರೆ.

ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ 39 ವರ್ಷದ ರೊನಾಲ್ಡಿನೊ ಮತ್ತು 49 ವರ್ಷದ ರಾಬರ್ಟೊ ಡಿ’ ಅಸಿಸ್ ಅವರನ್ನು ಸ್ಥಳೀಯ ಪೊಲೀಸರು ಗಾಲ್ಫ್ ಕ್ಲಬ್ ಮತ್ತು ರೆಸಾರ್ಟ್ ಯಾಟ್ಚ್ ಒಂದರಲ್ಲಿ ಬುಧವಾರ ತಡರಾತ್ರಿ ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ರೊನಾಲ್ಡಿನೊ ನಕಲಿ ಪಾಸ್ ಪೋರ್ಟ್ ಹೊಂದಿದ್ದಾರೆ. ಇದು ಕಾನೂನು ಬಾಹೀರ ಕೆಲಸವಾಸ ಕಾರಣ ಅವರನ್ನು ಬಂಧಿಸಲು ಆದೇಶಿಸಲಾಗಿದೆ.

ಕ್ರೀಡೆಯಲ್ಲಿ ಅವರ ಜನಪ್ರಿಯತೆಗೆ ನನ್ನ ಗೌರವವಿದೆ. ಆದರೆ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಪರಗ್ವೆಯ ಸಚಿವ ಎಕ್ಯೂಲಿಡೆಸ್ ಆಶೆವೆಡೊ ಮಾಧ್ಯಮಕ್ಕೆ ಹೇಳಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿದಿದೆ ಎಂದು ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲಿ ತನಕ ರೊನಾಲ್ಡಿನೊ ಮತ್ತು ಅವರ ಸಹೋದರ ಹೋಟೆಲ್ ನಲ್ಲೇ ಪೊಲೀಸರ ಕಣ್ಗಾವಲಿನಲ್ಲಿ ಗೃಹಬಂಧನದಲ್ಲೇ ಉಳಿಯಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!