ಛತ್ತೀಸಘಡ: ರಾಜ್ಯದ ನಾರಾಯಣಪುರದಲ್ಲಿ ನಕ್ಸಲರು ಹಾಗೂ ಡಿ ಆರ್ ಜಿ( ಜಿಲ್ಲಾ ಮೀಸಲು ಪಡೆ) ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಯೋಧ ಹುತಾತ್ಮನಾಗಿದ್ದು, ಮತ್ತೋರ್ವ ಯೋಧನಿಗೆ ಗಾಯಗಳಾಗಿದೆ ಎಂದು ವರದಿ ತಿಳಿಸಿದೆ.
ಓರ್ಛಾ ಪೊಲೀಸ್ ಠಾಣೆ ವ್ಯಾಪ್ತಿಯ ತಾಡೂರ್ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದ್ದು, ಕಾನ್ಸ್ಟೆಬಲ್ ಬಜ್ಜು ರಾಮ್ ಕಚ್ಲಾಮ್ ಅವರಿಗೆ ಗಾಯಗಳಾಗಿದ್ದು, ಸಂತು ವಡ್ಡೆಯೆಂಬ ಯೋಧ ಹುತಾತ್ಮರಾಗಿದ್ದಾರೆ.