ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸದಾ ಕಣ್ಗಾವಲು ಇರಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಶೀಘ್ರದಲ್ಲೇ ಹೆಚ್ಚು ಶಕ್ತಿಶಾಲಿ ಮತ್ತು ತಾಂತ್ರಿಕವಾಗಿ ಸುಧಾರಿತವಾಗಿರುವ ಡ್ರೋನ್ಗಳನ್ನು ನಿಯೋಜಿಸಲಿದೆ.
ಮುಂದಿನ ಮೂರು ತಿಂಗಳಲ್ಲಿ ಛತ್ತೀಸ್ಗಢದ ಸುಕ್ಮಾ, ದಂತೇವಾಡ ಮತ್ತು ಬಿಜಾಪುರ ಸೇರಿದಂತೆ ಕೆಂಪು ವಲಯ ಪ್ರದೇಶಗಳಲ್ಲಿ 14 ಡ್ರೋನ್ಗಳು ನಿಯೋಜಿಸಲಾಗುತ್ತದೆ ಎಂದು ಸಿಆರ್ಪಿಎಫ್ ಮಾಹಿತಿ ನೀಡಿದೆ.
ಮೈಕ್ರೋ ಯುಎವಿ ಎ 410 ನ ಈ ಡ್ರೋನ್ಗಳು 60 ನಿಮಿಷಗಳವರೆಗೆ ಹಾರಾಟ ನಮಾಡುವ ಸಾಮರ್ಥ್ಯ ಹೊಂದಿದ್ದು, ಲಂಬವಾಗಿ ಮೇಲಕ್ಕೇರುವ ಟೇಕ್-ಆಫ್ ಮತ್ತು ಸಣ್ಣ ಆರ್ಪಿಎ (remotely piloted aircraft) ಮುಖಾಂತರ ಲ್ಯಾಂಡಿಂಗ್ ಆಗಲಿವೆ.
ಇವು ಡಿಜಿಟಲ್ ಎನ್ಕ್ರಿಪ್ಟ್ ಮಾಡಲಾದ ಸಂವಹನ ಲಿಂಕ್ನೊಂದಿಗೆ ಟೇಕ್-ಆಫ್ನಿಂದ ಲ್ಯಾಂಡಿಂಗ್ವರೆಗೆ ಸ್ವಾಯತ್ತ ಕಾರ್ಯಾಚರಣೆಯನ್ನು ನಡೆಸುತ್ತವೆ. ಹೆಚ್ಡಿ ಕ್ಯಾಮೆರಾ ಹೊಂದಿದ್ದು, ಕಣ್ಗಾವಲು ಮತ್ತು ಭದ್ರತಾ ಕಾರ್ಯಾಚರಣೆಗಳಿಗೆ ವಿಶ್ವಾಸಾರ್ಹ ವೈಮಾನಿಕ ಚಿತ್ರಣವನ್ನು ಒದಗಿಸಲಿವೆ.ಇನ್ನು ಈ ಡ್ರೋನ್ಗಳು ಸುಮಾರು 20 ನಿಮಿಷ ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿರುತ್ತವೆ. 5 ಕಿಲೋಮೀಟರ್ ವ್ಯಾಪ್ತಿ ಹೊಂದಿವೆ.