Monday, July 4, 2022

Latest Posts

ನಟಿ ಊರ್ಮಿಳಾ ಮಾತೋಂಡ್ಕರ್ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್: ದೂರು ದಾಖಲು

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಅವರ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ ಎಂದು ಮಹಾರಾಷ್ಟ್ರ ಸೈಬರ್ ಅಪರಾಧ ದಳದ ಅಧಿಕಾರಿಗಳಲ್ಲಿ ಎಫ್‌ಐಆರ್ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಊರ್ಮಿಳಾ, ‘ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್‌ ಮಾಡಲಾಗಿದೆ. @instagram. ಮೊದಲು ಅವರು ನಿಮ್ಮ ಖಾತೆಯಿಂದ ಕೆಲ ಡೈರೆಕ್ಟ್ ಮೆಸೇಜ್ ಕಳಿಸಿ ಕೆಲ ಸ್ಟೆಪ್ ಗಳನ್ನು ಅನುಸರಿಸಲು ಮತ್ತು ಖಾತೆಯನ್ನು ಪರಿಶೀಲಿಸಲು ಕೇಳುತ್ತಾರೆ ಮತ್ತು ನಂತರ ಅದು ಹ್ಯಾಕ್ ಆಗುತ್ತದೆ. ನಿಜವೆ?#NotDone,” ಎಂದು ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಬರೆದಿದ್ದಾರೆ .
‘ಅಕೌಂಟ್ ಹ್ಯಾಕ್ ಬಗ್ಗೆ ತಾನು ಮಹಾರಾಷ್ಟ್ರ ಸೈಬರ್‌ ಅಧಿಕಾರಿಗಳಿಗೆ ಎಫ್‌ಐಆರ್ ಸಲ್ಲಿಸಿದ್ದೇನೆ, ಮಹಿಳೆಯರು ‘ಸೈಬರ್ ಅಪರಾಧಗಳನ್ನು’ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಉತ್ತರ ಮುಂಬೈ ಕ್ಷೇತ್ರದಿಂದ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾತೋಂಡ್ಕರ್ ಇತ್ತೀಚೆಗೆ ಕೈ ಪಕ್ಷ ತೊರೆದು ಶಿವಸೇನೆ ಸೇರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss