Saturday, July 2, 2022

Latest Posts

ನಟಿ ಐಶ್ವರ್ಯಾ ರೈ ಬಚ್ಚನ್, ಮಗಳು ಆರಾದ್ಯ ಬಚ್ಚನ್‌ಗೆ ಕೊರೋನಾ ಪಾಸಿಟಿವ್

ನವದೆಹಲಿ: ಬಾಲಿವುಡ್‌‌ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್‌‌ ಹಾಗೂ ಅವರ ಮಗಳು ಆರಾದ್ಯ ಬಚ್ಚನ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಪತಿ ಅಭಿಷೇಕ್ ಬಚ್ಚನ್ ಹಾಗೂ ಮಾವ ಅಮಿತಾಬ್ ಬಚ್ಚನ್ ನಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಐಶ್ವರ್ಯ, ಪುತ್ರಿ ಆರಾಧ್ಯಾ ಹಾಗೂ ಅತ್ತೆ ಜಯಾ ಬಚ್ಚನ್ ಅವರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ಇದೀಗ ಮೂವರ ವರದಿ ಬಂದಿದ್ದು, ಐಶ್ವರ್ಯಾ ಹಾಗೂ ಆರಾಧ್ಯಾಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಜಯಾ ಬಚ್ಚನ್ ಅವರಿಗೆ ನೆಗಟಿವ್ ಬಂದಿದೆ.
ಶನಿವಾರ ಬಾಲಿವುಡ್‌ನ ಹಿರಿಯ ನಟ ಬಿಗ್ ಬಿ ಎಂದೇ ಖ್ಯಾತಿಯನ್ನು ಪಡೆದಿರುವ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್‌ ಅವರಿಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss