ಇತ್ತೀಚಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಸಿಕ್ಕಾಪಟ್ಟೆ ಚರ್ಚೆಯಲಿದ್ದಾರೆ. ಬಾಲಿವುಡ್ ಮತ್ತು ಕೆಲವು ರಾಜಕೀಯ ವ್ಯಕ್ತಿಗಳ ವಿರುದ್ಧ ಗುಡುಗುತ್ತಿದ್ದಾರೆ. ವಿವಾದಗಳ ಮೂಲಕವೇ ಸದ್ದು ಮಾಡುತ್ತಿರುವ ಕಂಗನಾ ಇತ್ತೀಚಿಗೆ ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಕಂಗನಾ ಸದ್ಯ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಬಳಿಕ ಸುಮಾರು ೭ ತಿಂಗಳ ನಂತರ ಕಂಗನಾ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಸೆಟ್ ನಲ್ಲಿರುವ ಕೆಲವು ಫೋಟೋಗಳನ್ನು ಹಂಚಿಕೊಂಡು, ಮತ್ತೆ ಚಿತ್ರೀಕರಣಕ್ಕೆ ಮರಳಿದ ಸಂತಸವನ್ನು ವ್ಯಕ್ತಪಡಿಸಿದ್ದರು.
ಅಂದ್ಹಾಗೆ ಕಂಗನಾ ಈ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಜಯಲಲಿತಾ ಹಾಗೆ ಕಾಣಿಸಲು ಕಂಗನಾ ೨೦ ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ಚಿತ್ರೀಕರಣ ಮುಗಿಯುತ್ತ ಬಂದಿದೆ. ಕೊನೆಯ ೧೫ ದಿನಗಳ ಚಿತ್ರೀಕರಣ ಬಾಕಿ ಇದೆ. ಹಾಗಾಗಿ ಮತ್ತೆ ತೂಕ ಇಳಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ ಕಂಗನಾ. ತೂಕ ಇಳಿಸಿಕೊಳ್ಳಲು ಯೋಗ ಮತ್ತ ಜಿಮ್ ನ ಮೊರೆಹೋಗಿದ್ದಾರೆ. ಕಂಗನಾ ಯೋಗ ಮಾಡುತ್ತಿರುವ ವ ವಿಸ್ಮಯಕಾರಿ ಫೋಟೋ ಶೇರ್ ಮಾಡಿ ತೂಕ ಹೇಗೆ ಇಳಿಸಿಕೊಳ್ಳುತ್ತಿದ್ದಾರೆ ಎಂದು ತೋರಿಸಿದ್ದಾರೆ. ಅಂದ್ಹಾಗೆ ಕಂಗನಾ ಮುಂದಿನ ಸಿನಿಮಾ ಧಾಕಡ್ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳುತ್ತಿದ್ದಾರೆ. ತೂಕ ಇಳಿಕೆಯ ಬಗ್ಗೆ ಕಂಗನಾ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ’ನಾನು ತಲೈವಿ ಸಿನಿಮಾಗಾಗಿ ೨೦ ಕೆಜಿ ತೂಕ ಹೆಚ್ಚಿಸಿಕೊಂಡಿದ್ದೆ. ಈಗ ಈ ಸಿನಿಮಾ ಮುಗಿಯುತ್ತ ಬಂದಿದೆ. ಮತ್ತೆ ನಾನು ಹಳೆಯ ತೂಕಕ್ಕೆ ಹಿಂದಿರುಗುತ್ತಿದ್ದೇನೆ.