ಮುಂಬೈ: ನಟಿ ಕಂಗನಾ ರನೌತ್ ಬಳಿಕ ಆಕೆಯ ಸಹೋದರಿ ರಂಗೋಲಿ ಚಾಂದೇಲ್ ವಿರುದ್ಧ ಈಗ ಪೊಲೀಸ್ ದೂರು ದಾಖಲಿಸಲು ಕೋರ್ಟ್ ಆದೇಶಿಸಿದೆ.
ಹೌದು, ಸಾಮಾಜಿಕ ಜಾಲತಾಣದ ಮೂಲಕ ಸಮುದಾಯಗಳ ನಡುವೆ ಒಡಕು ಮೂಡಿಸಲು ಯತ್ನಿಸಿದ ಆರೋಪದ ಮೇಲೆ ಬಾಂದ್ರಾ ಮ್ಯಾಜಿಸ್ಟ್ರೇಟ್ ಮೆಟ್ರೋಪಾಲಿಟನ್ ಕೋರ್ಟ್ ನಟಿ ಕಂಗನಾ ರನೌತ್ ಹಾಗೂ ರಂಗೋಲಿ ಚಾಂದೇಲ್ ವಿರುದ್ಧ ಪೊಲೀಸ್ ದೂರು ದಾಖಲಿಸಲು ಆದೇಶಿಸಿದೆ.
ಬಾಲಿವುಡ್ ನಟಿ ಕಂಗನಾ ರನೌತ್ ಮತ್ತು ಅವರ ಸಹೋದರಿ ರಂಗೋಲಿ ಚಾಂದೇಲ್ ವಿರುದ್ಧ ಬಾಂದ್ರಾದ ಮ್ಯಾಜಿಸ್ಟ್ರೇಟ್ ಕೋರ್ಟ್ ಎಫ್ ಐಆರ್ ದಾಖಲಿಸಿ, ಟ್ವೀಟ್ ಮೂಲಕ ದ್ವೇಷ ಮತ್ತು ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ದೂರನ್ನು ಆಧರಿಸಿ ಎಫ್ ಐಆರ್ ದಾಖಲಿಸಲು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜೇಡಿಯೋ ಖುಲೆ ಆದೇಶಿಸಿದೆ. ವಿನ್ಯಾಸಕ ಹಾಗೂ ಫಿಟ್ನೆಸ್ ತರಬೇತುದಾರ ಮುನ್ನಾವರಲಿ ಸಯ್ಯದ್ ನೀಡಿದ ದೂರಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಜಯದೇವ್ ಘುಲೆ ಈ ಆದೇಶವನ್ನು ನೀಡಿದ್ದಾರೆ.
ಐಪಿಸಿ ಸೆಕ್ಷನ್ 153 ಎ, 295 ಎ( ಧರ್ಮವನ್ನು ಅಪಮಾನಿಸುವ ಮೂಲಕ ಕೋಮು ಭಾವನೆ ಕೆರಳಿಸುವ ಚಟುವಟಿಕೆ) ಮತ್ತು 124ಎ ಅನ್ವಯ ದೇಶದ್ರೋಹದ ಆಧಾರದ ಮೇಲೆ ಪ್ರಕರಣ ದಾಖಲಿಸಬೇಕೆಂದು ಸಯ್ಯದ್ ದೂರಿನಲ್ಲಿ ಕೇಳಿಕೊಂಡಿದ್ದರು.