Thursday, August 11, 2022

Latest Posts

ನಟಿ ಕಂಗನಾ ರಣಾವತ್‌ ಕಚೇರಿ ನೆಲಸಮ ಪ್ರಕರಣ: ಅ. 5ಕ್ಕೆ ವಿಚಾರಣೆ ಮುಂದೂಡಿದ ಬಾಂಬೆ ಹೈಕೋರ್ಟ್

ಮುಂಬೈ: ನಟಿ ಕಂಗನಾ ರಣಾವತ್‌ ಅವರ ಕಚೇರಿ ನೆಲಸಮ ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಅಕ್ಟೋಬರ್‌ 5ಕ್ಕೆ ಮುಂದೂಡಿಕೆ ಮಾಡಿದೆ.
ಅಕ್ಟೋಬರ್‌ 5 ರಂದು ಎರಡೂ ಕಡೆಯವರು ಲಿಖಿತ ದಾಖಲೆ ಸಲ್ಲಿಸುವಂತೆ ಕೋರ್ಟ್‌ ಸೂಚಿಸಿದ್ದು, ಆ ಬಳಿಕ ವಾದ, ಪ್ರತಿವಾದ ಆಲಿಸುವುದಾಗಿ ತಿಳಿಸಿದೆ.
ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿ ನಟಿ ಕಂಗನಾ ರಣಾವತ್‌ ಟ್ವೀಟ್‌ ಮಾಡಿದ್ದರು. ಕಂಗಾನ ರಣಾವತ್‌ಗೆ ಶಿವಸೇನಾ ನಾಯಕ ಸಂಜಯ್‌ ರಾವತ್ ಬೆದರಿಕೆ ಹಾಕಿದ್ದ ಆರೋಪ ಕೇಳಿಬಂದಿತ್ತು. ಮುಂಬೈನ ಬಾಂದ್ರಾದಲ್ಲಿರುವ ರಣಾವತ್‌ ಅವರ ಕಚೇರಿಯನ್ನು ನೆಲಸಮ ಮಾಡಿದ ಬಿಎಂಸಿ ವಿರುದ್ಧ ಬಾಲಿವುಡ್ ನಟಿ ಕಂಗನಾ‌ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss