ಮುಂಬೈ : ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಸಾಕಷ್ಟು ಮಂದಿಯನ್ನು ಬಂಧಿಸಲಾಗಿದ್ದು, ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈಗಾಗಲೇ ನಟಿ ದೀಪಿಕಾ ಪಡುಕೋಣೆ, ರಕುಲ್ ಪ್ರೀತ್ ಸಿಂಗ್, ಸಾರ್ ಅಲಿ ಖಾನ್, ಶ್ರದ್ಧಾ ಸೇರಿದಂತೆ ಇನ್ನೂ ಹಲವರು ಎನ್ ಸಿ ಬಿ ಅಧಿಕಾರಿಗಳ ವಿಚಾರಣೆಗೆ ಒಳಗಾಗಿದ್ದಾರೆ. ಇದೀಗ ಮಾದಕ ವಸ್ತು ದಂಧೆಯಲ್ಲಿ ಗೇಬ್ರಿಯೆಲಾ ಸಹೋದರ, ಅಗಿಸಿಲಾಸ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆತನ ಜೊತೆ 30 ವರ್ಷದ ದಕ್ಷಿಣ ಆಫ್ರಿಕಾದ ಯುವಕನನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ನಿಷೇಧಿತ ಗಾಂಜಾ ಮತ್ತು ಆಲ್ ಪ್ರಜೋಲಮ್ ಅನ್ನು ವಶಕ್ಕೆ ಪಡೆಯಲಾಗಿದೆ. ಈತನ್ನು ಎನ್ ಸಿ ಬಿ ಅಧಿಕಾರಿಗಳು ಲೋನವಾಲಾ ರೆಸಾರ್ಟ್ ನಲ್ಲಿ ಬಂಧಿಸಿದ್ದಾರೆ. ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್, ನಟ ಅರ್ಜುನ್ ರಾಂಪಲ್ ಜೊತೆ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ.