ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ನಟ ದಿಗಂತ್ ವಿಚಾರಣೆ ಎದುರಿಸಿದ್ದರು, ಆದರೆ ಇದೀಗ ಮತ್ತೊಮ್ಮೆ ಸಿಸಿಬಿ ಪೊಲೀಸರು
ನೋಟಿಸ್ ನೀಡಿದ್ದಾರೆ. ಬುಧುವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಬುಲಾವ್ ನೀಡಿದ್ದಾರೆ ಎಂದು ಹೇಳಲಾಗಿದೆ. ಎರಡನೇ ಸಲ ನೀಡಿರುವ ನೋಟಿಸ್ನಲ್ಲಿ ಕೇವಲ ದಿಗಂತ್ ಹೆಸರು ಮಾತ್ರ ಇರುವುದು ಕುತೂಹಲ ಕೆರಳಿಸಿದೆ. ಡ್ರಗ್ಸ್ ಪ್ರಕರಣದಲ್ಲಿ ದಿಗಂತ್ಗೆ ಸಂಬಂಧಿಸಿದಂತೆ ಕೆಲವು ಸಾಕ್ಷ್ಯಗಳು ಲಭ್ಯವಾಗಿದ್ದು, ಸ್ಪಷ್ಟನೆಗಾಗಿ ವಿಚಾರಣೆಗೆ ಕರೆಯಲಾಗಿದೆ ಎಂಬ ಮಾಹಿತಿ ಇದೆ. ಆದರೆ, ವಿಚಾರಣೆ ಮುಗಿಯುವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ.
ಸೆಪ್ಟೆಂಬರ್ 16 ರಂದು ನಟ ದಿಗಂತ್ ಮತ್ತು ಐಂದ್ರಿತಾ ರೇ ದಂಪತಿ ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಒಳಪಟ್ಟಿದ್ದರು. ಬೆಳಗ್ಗೆ 11 ಗಂಟೆಗೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಆಗಮಿಸಿದ್ದ ದಿಗಂತ್ ದಂಪತಿ ಸಂಜೆ ವೇಳೆಗೆ ವಿಚಾರಣೆ ಮುಗಿಸಿ ಹಿಂತಿರುಗಿದರು.
ಈ ವೇಳೆ ಮಾತನಾಡಿದ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ದಿಗಂತ್-ಐಂದ್ರಿತಾ ಅವರ ವಿಚಾರಣೆ ಆಗಿದೆ, ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಮತ್ತೊಮ್ಮೆ ವಿಚಾರಣೆಗೆ ಕರೆಯುತ್ತೇವೆ’’ ಎಂದಿದ್ದರು. ಹೇಳಿದಂತೆ ಎರಡನೇ ಸಲ ದಿಗಂತ್ಗೆ ವಿಚಾರಣೆ ಮಾಡಲು ಮುಂದಾಗಿದ್ದಾರೆ. ದಿಗಂತ್ ಸಹ ’’ಸಿಸಿಬಿ ತನಿಖೆಗೆ ಸಹಕರಿಸುತ್ತೇವೆ. ಮತ್ತೆ ವಿಚಾರಣೆಗೆ ಕರೆದರೆ ಅಗತ್ಯವಾಗಿ ಬರುತ್ತೇವೆ’’ ಎಂದಿದ್ದರು.