ಹೊಸದಿಗಂತ ಆನ್ ಲೈನ್ ಡೆಸ್ಕ್:
ಪಂಜಾಬ್ ರಾಜ್ಯದ ಪಟಿಯಾಲದಲ್ಲಿ ನಡೆಯುತ್ತಿದ್ದ ಬಾಲಿವುಡ್ ನಟ ಬಾಬಿ ಡಿಯೋಲ್ರ ‘ಲವ್ ಹಾಸ್ಟೆಲ್’ ಚಿತ್ರೀಕರಣವನ್ನು ಪ್ರತಿಭಟನಾನಿರತ ರೈತರು ಸ್ಥಗಿತಗೊಳಿಸಿದ್ದಾರೆ.
ಬಾಬಿ ಡಿಯೋಲ್ರ ಸಹೋದರ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್, ಕೇಂದ್ರದ ಕೃಷಿ ಕಾನೂನುಗಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಇದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಜಾನ್ವಿ ಕಪೂರ್ ಅಭಿನಯದ ‘ಗುಡ್ ಲಕ್ ಜೆರ್ರಿ’ ಸಿನಿಮಾ ಚಿತ್ರೀಕರಣವನ್ನು ರೈತರು ನಿಲ್ಲಿಸಿದ್ದರು. ಕೇಂದ್ರ ಸರ್ಕಾರದೊಂದಿಗಿನ ತಮ್ಮ ಸಮಸ್ಯೆ ಬಗೆಹರಿಯುವವರೆಗೂ ಯಾವುದೇ ಬಾಲಿವುಡ್ ಸೆಲೆಬ್ರಿಟಿಗಳಿಗೆ ಪಂಜಾಬ್ನಲ್ಲಿ ಶೂಟಿಂಗ್ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.