Thursday, August 11, 2022

Latest Posts

ನಟ ಸುಶಾಂತ್​ ಜೊತೆ ತೆರೆ ಹಚ್ಚಿಕೊಂಡಿದ್ದ ಇನ್ನೋರ್ವ ಖ್ಯಾತ ನಟ ಆತ್ಮಹತ್ಯೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬಾಲಿವುಡ್ ನಟ ಸುಶಾಂತ್​ ಜೊತೆ ತೆರೆ ಹಚ್ಚಿಕೊಂಡಿದ್ದ ಇನ್ನೋರ್ವ ಖ್ಯಾತ ನಟ ಆಸಿಫ್ ಬಸ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅವರ ಮೃತದೇಹ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದ ಅವರ ಮನೆಯಲ್ಲಿ ಪತ್ತೆಯಾಗಿದೆ. ಅವರ ಆತ್ಮ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಬಸ್ರಾ ಕಳೆದ ಐದು ವರ್ಷಗಳಿಂದ ಮೆಕ್ಲಿಯೋಡ್‌ಗಂಜ್‌ನಲ್ಲಿರುವ ಈ ಬಾಡಿಗೆ ಮನೆಯಲ್ಲಿ ಅಮೆರಿಕಾ ಮೂಲದ ಗೆಳತಿ ಜೊತೆ ವಾಸಿಸುತ್ತಿದ್ದರು.
ಇಂದು (ಗುರುವಾರ) ಮಧ್ಯಾಹ್ನ ಆಸಿಫ್​​ ತಮ್ಮ ಸಾಕು ನಾಯಿ ಜೊತೆ ಹೊರಗೆ ಹೋಗಿದ್ದು, ಅಲ್ಲಿಂದ ವಾಪಸ್ ಬಂದ ನಂತರ ನೇಣಿಗೆ ಶರಣಾಗಿದ್ದಾರೆ.
ಇತ್ತೀಚೆಗೆ ನಿಗೂಢವಾಗಿ ಮೃತಪಟ್ಟಿರುವ ನಟ ಸುಶಾಂತ್​ ರಜಪೂತ್​ ಜತೆ ‘ಕಾಯ್​ ಪೂಚ್’ ಸಿನಿಮಾದಲ್ಲಿನ ಇವರ ನಟನೆ ಎಲ್ಲರ ಮಸೆಳೆದ್ದಿತ್ತು.
ಬಸ್ರಾ ಕಿರುತೆರೆ ಸೇರಿದಂತೆ ಬಾಲಿವುಡ್​​ನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss