Thursday, August 18, 2022

Latest Posts

ನಟ ಸುಶಾಂತ್ ಆತ್ಮಹತ್ಯೆ ಪ್ರಕರಣ: ಏಮ್ಸ್ ನೀಡಿದ ವರದಿಯಲ್ಲಿಲ್ಲ ಸುಶಾಂತ್ ಸಾವಿನ ಸಮಯ!

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಏಮ್ಸ್ ತನ್ನ ವರದಿಯನ್ನು ಸಿಬಿಐಗೆ ಸಲ್ಲಿಸಿದ್ದು, ಇದರಲ್ಲಿ ಸಾವಿನ ಸಮಯದ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ.
ಕೂಪರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಏಮ್ಸ್ ನೀಡಿದ ವರದಿಯಲ್ಲಿ ಮರಣದ ಸಮಯವೇ ಇಲ್ಲದಿರುವುದು ಹಲವಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ವಿಧಿವಿಜ್ಞಾನ ಮಂಡಳಿಯ ಅಧ್ಯಕ್ಷ ಸುಧೀರ್ ಗುಪ್ತಾ ತನ್ನ ನಿರ್ಣಾಯಕ ವರದಿಯನ್ನು ಸಿಬಿಐಗೆ ಸಲ್ಲಿಸಿದ್ದಾರೆ ಎಂದು ಏಮ್ಸ್ ಮೂಲ ತಿಳಿಸಿದೆ ಎನ್ನಲಾಗಿದೆ.
ನಿರ್ಣಾಯಕ ವರದಿಯಲ್ಲಿ ಮರಣೋತ್ತರ ಪರೀಕ್ಷೆ ವೇಳೆ ಕೂಪರ್ ಆಸ್ಪತ್ರೆಯಲ್ಲಿ ಏನು ನಡೆಯಿತು ಎನ್ನುವುದರ ಬಗ್ಗೆ ಗಮನ ಹರಿಸಬೇಕಿದೆ ಎನ್ನಲಾಗಿದೆ.  ಕೂಪರ್ ಆಸ್ಪತ್ರೆಯ ಮೂವರು ವೈದ್ಯರು ಸುಶಾಂತ್ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸಾವಿನ ಸಮಯ ಹಾಗೂ ಸುಶಾಂತ್ ಹೊಟ್ಟೆಯಲ್ಲಿ ದೊರೆತ ವಸ್ತುವಿನ ಬಗ್ಗೆಯೂ ಗಮನಹರಿಸಬೇಕಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!