Wednesday, August 17, 2022

Latest Posts

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ, ಇಡಿ ಇಲಾಖೆಯಿಂದ ರಿಯಾಗೆ ನೋಟಿಸ್ ಜಾರಿ, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ನಟ ಸುಶಾಂತ್ ಸಿಂಗ್  ರಜಪೂತ್  ಸಾವಿನ  ಪ್ರಕರದಲ್ಲಿ  ಪ್ರೇಯಸಿ  ರಿಯಾ  ಚಕ್ರವರ್ತಿ  ಅವರ ಮೇಲೆ  ಅನುಮಾನ  ಜಾಸ್ತಿಯಾಗಿದೆ.  ಸುಶಾಂತ್ ತಂದೆ ಕೆ.ಕೆ. ಸಿಂಗ್ ಈಗಾಗಲೇ ರಿಯಾ ವಿರುದ್ಧ ದೂರು ದಾಖಲು ಮಾಡಿದ್ದಾರೆ. ’ತಮ್ಮ ಮಗನ ಖಾತೆಯಿಂದ ರಿಯಾ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ’ ಎಂದು ಕೆ.ಕೆ. ಸಿಂಗ್ ಆರೋಪಿಸಿದ್ದರು. ಪಾಟ್ನಾ ಪೊಲೀಸರು ದಾಖಲಿಸಿದ್ದ

ಎಫ್ಐಆರ್  ಆಧಾರವಾಗಿಟ್ಟುಕೊಂಡು ಜಾರಿ ನಿರ್ದೇಶನಾಲಯವು ಮನಿ ಲಾಂಡರಿಂಗ್ ಕೇಸ್ ದಾಖಲಿಸಿತ್ತು. ಇದೀಗ ನಟಿ ರಿಯಾಗೆ ಇಡಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ

ಶುಕ್ರವಾರ  ಬೆಳಗ್ಗೆ ೧೧.೩೦ಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸುವ ವಿಚಾರಣೆಗೆ ಹಾಜರಾಗುವಂತೆ ರಿಯಾಗೆ ಸೂಚಿಸಲಾಗಿದೆ. ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಗಳಿಂದ ಅನುಮಾನಾಸ್ಪದ ಹಣಕಾಸಿನ ವಹಿವಾಟು ನಡೆದಿದೆ ಎಂಬ ಆರೋಪ ಕೇಳಿಬಂದಿರುವುದರಿಂದ, ಆ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಚಾರಣೆ ಮಾಡುವ ಸಾಧ್ಯತೆಗಳಿವೆ. ಇಡೀ ಪ್ರಕರಣವನ್ನು ಆರ್ಥಿಕ ಕೋನದಿಂದಲೂ ವಿಚಾರಣೆ ನಡೆಸುವ ಸಾಧ್ಯತೆ ಇದೆ. ರಿಯಾ ಈಚೆಗೆ ದುಬಾರಿ ಮೊತ್ತದ ಆಸ್ತಿ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಅವರ ಆದಾಯದ ಮೂಲದ ಬಗ್ಗೆಯು ಅಧಿಕಾರಿಗಳು ತನಿಖೆ ನಡೆಸಲಿದ್ದಾರಂತೆ.

 

ಸುಶಾಂತ್ ಸಿಂಗ್ ಮತ್ತು ರಿಯಾ ಪ್ರೀತಿ ಮಾಡುತ್ತಿದ್ದರು. ಒಟ್ಟಿಗೆ ಒಂದೇ ್ಲ್ಯಾಟ್ನಲ್ಲಿ ಇಬ್ಬರು ವಾಸವಾಗಿದ್ದರು. ಆದರೆ, ಜೂನ್ ೯ರಂದು ಜಗಳ ಮಾಡಿಕೊಂಡು ್ಲ್ಯಾಟ್ನಿಂದ ರಿಯಾ ಹೊರನಡೆದಿದ್ದರು. ಅದಾಗಿ ಐದು ದಿನಗಳ (ಜೂ.೧೪) ನಂತರ ಸುಶಾಂತ್ ಅದೇ ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಕೈಗೆತ್ತಿಕೊಂಡಿದ್ದ ಮುಂಬೈ ಪೊಲೀಸರು ರಿಯಾ ಅವರನ್ನು ೮ ಗಂಟೆಗೂ ಅಧಿಕ ಸಮಯ ವಿಚಾರಣೆ ಮಾಡಿದ್ದರು. ಆದಾದ ಮೇಲೆ ಸ್ವತಃ ರಿಯಾ, ಈ ಕೇಸ್ ಅನ್ನು ಸಿಬಿಐಗೆ ನೀಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಮನವಿ ಮಾಡಿಕೊಂಡಿದ್ದರು.

 

ಯಾವಾಗ ಪಾಟ್ನಾದಲ್ಲಿ ಸುಶಾಂತ್ ಪೋಷಕರು ರಿಯಾ ವಿರುದ್ಧವೇ ಪ್ರಕರಣ ದಾಖಲಿಸಿದರೋ, ಇಡೀ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿತು. ಈಗಾಗಲೇ ಖ್ಯಾತ ವಕೀಲ ಸತೀಶ್ ಮಾನೆಶಿಂ‘ೆ ಅವರನ್ನು ತಮ್ಮ ಪರವಾಗಿ ವಾದ ಮಂಡಿಸಲು ರಿಯಾ ನೇಮಿಸಿಕೊಂಡಿದ್ದು, ಯಾರ ಕಣ್ಣಿಗೂ ಕಾಣಿಸಿಕೊಳ್ಳದೆ ನಾಪತ್ತೆ ಆಗಿದ್ದಾರೆ. ಆ. ೭ರಂದು ಇಡಿ ಅಧಿಕಾರಿಗಳ ಮುಂದೆ ಅವರು ಹಾಜರಾಗುತ್ತಾರಾ ಎಂಬುದನ್ನು ಸದ್ಯ ಕಾದು ನೋಡಬೇಕಿದೆ. ಇನ್ನು, ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!