ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ತನಿಖೆ ಮಾಡುತ್ತಿರುವ ಸಿಬಿಐ ವು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಹಾಗು ತನಿಖೆ ಇನ್ನು ಹಂತದಲ್ಲಿದೆ ಎಂದು ತನಿಖಾ ತಂಡಹೇಳಿದೆ.
ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಮುಂಬೈ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣವನ್ನು ಸಿಬಿಐ ಕೇಂದ್ರ ತನಿಖಾ ದಳ ವೃತ್ತಿಪರ ತನಿಖೆಯನ್ನು ನಡೆಸುತ್ತಿದೆ, ಇದರಲ್ಲಿ ಎಲ್ಲಾ ಅಂಶಗಳನ್ನು ಗಮನಿಸಲಾಗುತ್ತಿದೆ ಮತ್ತು ಇಲ್ಲಿಯವರೆಗೂ ಯಾವುದೇ ಅಂಶವನ್ನು ತಳ್ಳಿ ಹಾಕಿಲ್ಲ ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದರ ಸುಶಾಂತ್ ಸಿಂಗ್ ತಂದೆ ಕೆ ಕೆ ಸಿಂಗ್ ಪಾಟ್ನಾದಲ್ಲಿ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ವಿರುದ್ಧ ದಾಖಲಿಸಿದ್ದ ದೂರಿನ ತನಿಖೆಯನ್ನು ಸಿಬಿಐ ನಡೆಸುತ್ತಿದೆ.
ಇನ್ನು ತನಿಗೆ ನಿಧಾನಗತಿಯಲ್ಲಿ ಸಿಬಿಐ ನಡೆಸುತ್ತಿದೆ ಎಂದು ಸಿಂಗ್ ಪರ ವಕೀಲರು ಕಲೆದ ವಾರ ಅಸಹಾಯಕತೆ ವ್ಯಕ್ತಪಡಿಸಿದ್ದರು.
ಸುಶಾಂತ್ ಸಿಂಗ್ ಸ್ನೇಹಿತರಿಗೆ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ
ಇನ್ನು ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ ಎಂದಿರುವ ದಿವಂಗತ ನಟನ ಸ್ನೇಹಿತರಾದ ಗಣೇಶ್ ಹಿವಾಕರ್ ಮತ್ತು ಅಂಕಿತ್ ಆಚಾರ್ಯ ಅವರು ನಟನ ಸಾವಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ಅಕ್ಟೋಬರ್ 2ರಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸೋಮವಾರ ಘೋಷಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಕೊಲೆ ಪ್ರಕರಣದಲ್ಲಿ ನ್ಯಾಯ ಕೋರಿ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಂದು ಹಿವಾಕರ್ ಮತ್ತು ಆಚಾರ್ಯ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಪೊಲೀಸರು ಅನುಮತಿ ನೀಡಿದರೆ ನಾವು ದೆಹಲಿಯ ರಾಜ್ಘಾಟ್ ಅಥವಾ ಮುಂಬೈನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಈ ಎರಡೂ ನಗರಗಳಲ್ಲೂ ಉಪವಾಸ ಸತ್ಯಾಗ್ರಹ ನಡೆಸಲು ಪೊಲೀಸರಿಂದ ಅನುಮತಿ ನೀಡದಿದ್ದರೆ, ತಮ್ಮ ಸ್ವಂತ ಮನೆಯಲ್ಲಿಯೇ ಉಪವಾಸ ಸತ್ಯಾಗ್ರಹವನ್ನು ನಡೆಸುವುದಾಗಿ ತಿಳಿಸಿದ್ದಾರೆ.