ಹೊಸದಿಗಂತ ಆನ್ ಲೈನ್ ಡೆಸ್ಕ್:
ಪ್ರಾಣಿ ಹಕ್ಕುಗಳ ಸಂಸ್ಥೆ ಪೇಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ತನ್ನ 2020 ರ ವರ್ಷದ ವರದಿ ಪ್ರಕಟಿಸಿದ್ದು, ಈ ವರದಿ ಪ್ರಕಾರ ಈ ವರ್ಷದ ‘ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರೆಟಿ’ ಎಂದು ನಟ ಸೋನು ಸೂದ್ ಅವರ ಹೆಸರನ್ನು ಘೋಷಿಸಿದೆ.
ಇನ್ನು ನಟಿ ಶ್ರದ್ಧಾ ಕಪೂರ್ಗೂ ಇದೆ ಗೌರವ ನೀಡಿ ಗೌರವಿಸಿದೆ.
ಈ ಕುರಿತು ಪೇಟಾ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ನಟ ಸೋನುಸೂದ್ ಕೂಡ ತಮಗೆ ನೀಡಿರುವ ಗೌರವವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ‘ಪೇಟಾ ಸಂಸ್ಥೆಗೆ ಧನ್ಯವಾದಗಳು’ ಎಂದು ಬರೆದು ಕೊಂಡಿದ್ದಾರೆ.
Thank you @PetaIndia pic.twitter.com/Vclwg31toH
— sonu sood (@SonuSood) December 17, 2020