Thursday, June 30, 2022

Latest Posts

ನಡುರಸ್ತೆಯಲ್ಲಿ ಗುಂಡಿಕ್ಕಿ ಇರಾನ್ ಅಣುವಿಜ್ಞಾನಿ ಹತ್ಯೆ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇರಾನ್ ನ ಪ್ರಮುಖ ಅಣುವಿಜ್ಞಾನಿ ಮೋಹ್ಸೆನ್ ಫಖ್ರಿಜಾದೆಹ್ ಅವರನ್ನು ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ಮಹ್ಸೆನ್ ಅವರ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಈ ವೇಳೆ ಗುಂಡೇಟು ತಗುಲಿ ವಿಜ್ಞಾನಿ ಮಹ್ಸೆನ್ ತೀವ್ರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಿತಾದರೂ ಫಲಿಸದೆ ವಿಜ್ಞಾನಿ ಮಹ್ಸೆನ್ ನಿಧನರಾಗಿದ್ದಾರೆ ಎಂದು ಇರಾನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಮಹ್ಸೆನ್ ಅವರು ಶುಕ್ರವಾರ ಇರಾನ್ ನ ಆಬ್ಸರ್ಡ್ ನಗರದ ಸಮೀಪದಲ್ಲಿ ಪ್ರಯಾಣಿಸುವಾರ ಗುಂಡಿನ ದಾಳಿ ನಡೆಸಿದ್ದು, ದುರಾದೃಷ್ಟವಶಾತ್ ಮಹ್ಸೆನ್ ಅವರು ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಇರಾನ್ ನ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್ ನಮ್ಮ ಶತ್ರು ರಾಷ್ಟ್ರವಾಗಿರುವ ಇಸ್ರೇಲ್ ಈ ಕೃತ್ಯ ವೆಸಗಿದೆ ಎಂದು ಆರೋಪಿಸಿದ್ದಾರೆ.

ಮಹ್ಸೆನ್ ಅವರು ದೇಶದ ಪ್ರಮುಖ ಅಣುವಿಜ್ಞಾನಿಯಾಗಿದ್ದು, ಅಮದ್ ಎಂಬ ಪರಮಾಣುವನ್ನು ಕಾರ್ಯಕ್ರಮ ನಡೆಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss