ಹೊಸ ದಿಗಂತ ವರದಿ ಉಡುಪಿ:
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಶುಕ್ರವಾರ ರಾತ್ರಿ ನದಿಗೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರ ಕಾರ್ಮಿಕ ಜಾರ್ಖಂಡಿನ ಸಂಜಿತ್ ಡುಂಗ್ ಡುಂಗ್ (35) ಮೃತದೇಹ ಇಂದು ಪತ್ತೆಯಾಗಿದೆ.
ಗಂಗೊಳ್ಳಿಯ ಮ್ಯಾಂಗನೀಸ್ ವಾರ್ಫ್ ನಲ್ಲಿ ಬಫ್ರಿಹಿಂಡ್ ಪ್ರಸಾದ್ ದೋಣಿಯಲ್ಲಿ ಉಳಿದ ಆರು ಮಂದಿಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾಗ ಸಂಜಿತ್ ಆಕಸ್ಮಿಕವಾಗಿ ಪಂಚ ಗಂಗಾವಳಿ ನದಿಯ ನೀರಿನಲ್ಲಿ ಬಿದ್ದು ನಾಪತ್ತೆಯಾಗಿದ್ದರು. ಎರಡು ದಿನಗಳ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಇಂದು ಬೆಳಗ್ಗೆ ನದಿ ನೀರಿಗೆ ಬಿದ್ದ ಜಾಗದಲ್ಲಿಯೇ ಮೃತ ದೇಹ ಪತ್ತೆಯಾಗಿದೆ. ದೇಹವನ್ನು ಮೇಲೆತ್ತಿ, ಮರಣೋತ್ತರ ಪರೀಕ್ಷೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.