Thursday, August 11, 2022

Latest Posts

ನದಿ ತಟದಲ್ಲಿರುವವರು ಸ್ಥಳಾಂತರಗೊಂಡರೆ, ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ: ಅಪ್ಪಚ್ಚುರಂಜನ್

ಸುಂಟಿಕೊಪ್ಪ: ನದಿ ತಟದಲ್ಲಿ ಮನೆ ನಿರ್ಮಿಸಿಕೊಂಡು ಹಲವಾರು ದಶಕಗಳಿಂದ ನೆಲೆಸಿರುವ ಬಡಕೂಲಿ ಕಾರ್ಮಿಕರು ಅಲ್ಲಿಂದ ಸ್ಥಳಾಂತರಗೊಳ್ಳಲು ಮುಂದೆ ಬಂದರೆ ಅವರಿಗೆ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡುವುದಾಗಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ನದಿ ದಡದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವುದು ಎಂದಿಗೂ ಅಪಾಯವೆ. ಅದನ್ನು ಮನಗಂಡು ಅಲ್ಲಿ ನೆಲೆಸಿರುವ ಕುಟುಂಬಸ್ಥರು ಮನಸ್ಸು ಬದಲಾಯಿಸಿ ತಮ್ಮ ಮುಂದಿನ ಭವಿಷ್ಯದ ದಿಸೆಯಲ್ಲಿ ಹೊರ ಬರಲು ತಯಾರಿದ್ದರೆ ಅವರಿಗೆ ಸರಕಾರ ಸೂಕ್ತವಾದ ಸ್ಥಳದಲ್ಲಿ ಮನೆ ನಿರ್ಮಿಸಿ ಕೊಡಲಿದೆ. ಆದರೆ ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಿ ತಮ್ಮ ಬೇಡಿಕೆಯನ್ನು ಮುಂದಿಡಬೇಕೆಂದು ಶಾಸಕರು ತಿಳಿಸಿದರು.
ಕುಟ್ಟುಗೇರಿ ಪೈಸಾರಿಯಲ್ಲಿ ಚಿಕ್ಕಿಹೊಳೆಯ ನೀರು ಹರಿದು ಮನೆಗಳು ಸಂಪೂರ್ಣ ಕುಸಿದು ಬಿದಿದ್ದು ಕೆಲವು ಮನೆಗಳಿಗೆ ನೀರು ನುಗ್ಗಿ ಮನೆಗಳು ಶಿಥಿಲಗೊಂಡಿರುವುದನ್ನು ಪರಿಶೀಲಿಸಿದ ಬಳಿಕ ಶಾಸಕರು ಈ ಹೇಳಿಕೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss