Wednesday, August 10, 2022

Latest Posts

ನದಿ ಪೂಜೆ ಮಾಡುವೆ ವಿಡಿಯೋ ಮಾಡು ಎಂದು ಹೇಳಿ ಮಗನ ಕಣ್ಣೆದುರೇ ತುಂಬಿ ಹರಿಯುವ ನದಿಗೆ ಹಾರಿದ!

ವಿಜಯವಾಡ (ಆಂಧ್ರ ಪ್ರದೇಶ): ನದಿಗೆ ಪೂಜೆ ಸಲ್ಲಿಸುತ್ತೇನೆ, ವಿಡಿಯೋ ರೆಕಾರ್ಡ್​ ಮಾದು ಎಂದು ಮಗನಿಗೆ ಹೇಳಿ ವ್ಯಕ್ತಿಯೊಬ್ಬ ನದಿಗೆ ಹಾರಿ ನೀರಲ್ಲಿ ಕೊಚ್ಚಿಹೋಗಿರುವ ಘಟನೆ ಇಲ್ಲಿನ ಕನಕ ದುರ್ಗ ಸೇತುವೆಯಲ್ಲಿ ನಡೆದಿದೆ.
ವಿಜಯವಾಡದ ತಡಿಗಡಪ ಮೂಲದ ಅರವತ್ತು ವರ್ಷದ ವ್ಯಕ್ತಿ ದುರ್ಗಾ ಪ್ರಸಾದ್ ನೀರಲ್ಲಿ ನಾಪತ್ತೆಯಾದವರು. ಮಗನಿಗೆ ಮೊಬೈಲ್ ಜತೆಯಲ್ಲಿ ಪತ್ರವೊಂದನ್ನು​ ನೀಡಿದ ಈತ ಸೇತುವೆ ಮೇಲೆ ನಿಂತು ಪೂಜೆ ಮಾಡುತ್ತಾ ಮಗನಿಗೆ ಸ್ವಲ್ಪ ದೂರಕ್ಕೆ ಸರಿಯುವಂತೆ ಹೇಳಿ ದಿಢೀರನೇ ನದಿಗೆ ಹಾರಿದ್ದಾರೆ.
ಮಳೆಯಿಂದ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಪ್ರಸಾದ್​ ಮಗನ ಕಣ್ಣೆದುರಲ್ಲೇ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಮಗ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೈಯಲ್ಲಿದ್ದ ಚೀಟಿ ಬಿಡಿಸಿದಾಗ ಅದರಲ್ಲಿ ಅನಾರೋಗ್ಯವನ್ನು ಸಹಿಸದೇ ಆತ್ಮಹತ್ಯೆ ಶರಣಾಗಿದ್ದಾಗಿ ಪ್ರಸಾದ್ ಉಲ್ಲೇಖಿಸಿದ್ದಾರೆ. ದುರ್ಗಾ ಪ್ರಸಾದ್​ ದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss