Wednesday, August 17, 2022

Latest Posts

ನನಗೆ ಕೊರೋನಾ ಬಂದರೆ ಮಮತಾ ಬ್ಯಾನರ್ಜಿಯವರನ್ನು ಅಪ್ಪಿಕೊಳ್ಳುತ್ತೇನೆ ಎಂದ ಬಿಜೆಪಿ ನಾಯಕನಿಗೆ ಕೊರೋನಾ ದೃಢ

ಕೊಲ್ಕತ್ತ: ಒಂದು ವೇಳೆ ನನಗೆ ಕೊರೋನಾ ಬಂದರೆ  ನಾನು ಬಂದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಅಪ್ಪಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಅನುಪಮ್ ಹಜ್ರಾ ಅವರಿಗೆ ಈಗ ಕೊರೋನಾ ಪಾಸಿಟಿವ್ ಬಂದಿದೆ.

ಇತ್ತೀಚೆಗಷ್ಟೆ ಬಿಜೆಪಿ ಕಾರ್ಯದರ್ಶಿಯಾಗಿ ಅನುಪಮ್ ಹಜ್ರಾ ನೇಮಕಗೊಂಡಿದ್ದರು. ಅವರಿಗೆ ಈಗ ಕೊರೋನಾ ಪಾಸಿಟಿವ್ ಬಂದಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊವಿಡ್-19 ರೋಗಿಗಳ ಕುಟುಂಬಗಳ ನೋವನ್ನು ಮಮತಾ ಬ್ಯಾನರ್ಜಿಗೆ ಅರ್ಥ ಮಾಡಿಸಲು  ಈ ರೀತಿ ಮಾಡುವುದಾಗಿ ದಕ್ಷಿಣ 24 ಪರಗಣದ ಬರುಯಿಪುರದಲ್ಲಿ ಭಾನುವಾರ ಸಂಜೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಜ್ರಾ ನೀಡಿರುವ ಹೇಳಿಕೆ ಇದಾಗಿತ್ತು. ಹಜ್ರಾ ನೀಡಿರುವ ಹೇಳಿಕೆ ವಿರುದ್ಧ ಸಿಲಿಗುರಿಯಲ್ಲಿ ಟಿಎಂಸಿ ದೂರು ದಾಖಲಿಸಿದೆ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!