Wednesday, August 10, 2022

Latest Posts

ನನಗೆ ಸಚಿವ ಸ್ಥಾನ ಕೊಡಿ ಎಂದು ಪದೇ ಪದೇ ಸಿಎಂ ಭೇಟಿಯಾಗಿ ಕೇಳುವುದಿಲ್ಲ: ಹೆಚ್.ವಿಶ್ವನಾಥ್

ಹೊಸದಿಗಂತ ವರದಿ,ಮೈಸೂರು:

ನನಗೆ ಸಚಿವ ಸ್ಥಾನ ಕೊಡಿ ಎಂದು ನಾನು ಪದೇ ಪದೇ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೇಳುವುದಿಲ್ಲ, ಆ ಬಗ್ಗೆ ಮಾತನಾಡುವುದಿಲ್ಲ. ಮುಖ್ಯಮಂತ್ರಿ ಮಾಡಲು ಅವರ ಮುಂದೆ ನಿಂತವರಿಗೆ, ಸಹಾಯ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಯಾರನ್ನ ಸಚಿವ ಮಾಡಬೇಕು ಎಂಬ ಪರಮಾಧಿಕಾರ ಸಿಎಂಗಿದೆ. ಅವರನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿದವರನ್ನ ನೆನಪು ಮಾಡಿಕೊಳ್ಳಬೇಕು. ನಾನು ಪದೇ ಪದೇ ಅವರನ್ನ ಭೇಟಿಯಾಗಿ ಕೇಳುವುದಿಲ್ಲ, ಮಾತನಾಡುವುದಿಲ್ಲ. ಮುಖ್ಯಮಂತ್ರಿ ಮಾಡಲು ಅವರ ಮುಂದೆ ನಿಂತವರಿಗೆ ಸಹಾಯ ಮಾಡಬೇಕು. ಸದ್ಯ ನಾನು ವಿಧಾನಪರಿಷತ್ ಸದಸ್ಯನಿದ್ದೇನೆ. ಆರು ವರ್ಷಗಳ ಕಾಲ ನನ್ನನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ವಿಧಾನ ಪರಿಷತ್ ಸದನ ಸಮಿತಿಗೆ ರಾಜೀನಾಮೆ ನೀಡಿದ ವಿಚಾರ ಕುರಿತು ಪ್ರತಿಕ್ರಿಯಿಸಿ, ಸದನದಲ್ಲಿ ಗಲಾಟೆ ವಿಚಾರ ಸದನ ಸಮಿತಿ ಮಾಡಲಾಗಿತ್ತು. ರಾಜೀನಾಮೆ ನೀಡಲು ಬೇಕಾದಷ್ಟು ಕಾರಣಗಳಿವೆ. ಗಲಾಟೆ ಮಾಡಿದವರೇ ಅದ್ಯಕ್ಷರು, ಸದ್ಯಸರು. ಇದಕ್ಕೆ ಓಡಾಡಿದವರೇ ಸದಸ್ಯರು. ಇದರಿಂದ ರಾಜೀನಾಮೆ ನೀಡಿದೆ ಎದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss