Saturday, August 13, 2022

Latest Posts

ನನಗೆ ಸಚಿವ ಸ್ಥಾನ ನೀಡಿದ್ರೆ ಸ್ವೀಕರಿಸುವೆ, ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ

ಹೊಸ ದಿಗಂತ ವರದಿ, ಬಳ್ಳಾರಿ:

ನನ್ನ ಪುತ್ರ ನಿಷ್ಕಲ್ಮಶ ಮನಸ್ಸಿನಿಂದ ರಾಜಕಾರಣಕ್ಕೆ ಎಂಟ್ರಿ ಕೊಡೋದಾದ್ರೆ ಕೊಡಲಿ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಸಚಿವ ಸ್ಥಾನ ನೀಡಿದ್ರೆ ಸ್ವೀಕರಿಸುವೆ, ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಲಾಬಿ ಮಾಡಲ್ಲ. ನನಗೆ ಖಾಸಾಪುರ ಆಂಜನೇಯನ ಅನುಗ್ರಹ ಇದ್ದರೆ ಸಚಿವ ಸ್ಥಾನ ಸಿಕ್ಕೇ ಸಿಗಲಿದೆ. ಬಿಜೆಪಿ ಹೈಕಮಾಂಡ್ ಗುರುತಿಸಿ ಸಚಿವ ಸ್ಥಾನ ನೀಡಿದರೆ ಸ್ವೀಕರಿಸುವೆ ಎಂದರು. ನನ್ನ ಪುತ್ರ ರಾಜಕಾರಣಕ್ಕೆ ಬರವುದು ನನಗಂತೂ ಇಷ್ಟವಿಲ್ಲ. ಅವನೇನಾದ್ರೂ ರಾಜಕಾರಣಕ್ಕೆ ಬರೋದಾದ್ರೆ ನಿಷ್ಕಲ್ಮಶ ಮನಸ್ಸಿನಿಂದ ಬರಲಿ. ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಅವನಿಗೆ ರಾಜಕಾರಣಕ್ಕೆ ಬರುವ ಇಚ್ಛೆ ಇದೆ ಹೊಸ ಬಾಂಬ್ ಸಿಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss