‘ನನ್ನನ್ನು ಕ್ಷಮಿಸಿ, ನಾನು ಲಾಕ್‌ಡೌನ್ ಆದೇಶ ಉಲ್ಲಂಘಿಸಿದ್ದೇನೆ’

0
61

ಮಂಗಳೂರು: ಲಾಕ್‌ಡೌನ್ ಉಲ್ಲಂಘಿಸುವವರಿಗೆ ಪಾಠ ಕಲಿಸಲು ಪೊಲೀಸರು ವಿವಿಧ ಶಿಕ್ಷೆಯನ್ನು ಸ್ಥಳದಲ್ಲೇ ನೀಡುತ್ತಿದ್ದು, ರಸ್ತೆಗಿಳಿದವರಿಂದ ಬಸ್ಕಿ ತೆಗೆಸುತ್ತಿದ್ದಾರೆ. ಈ ಮಧ್ಯೆ ಮಂಗಳೂರಿನ ರಾಮಕೃಷ್ಣ ಮಠ ಮತ್ತು ಪೊಲೀಸ್ ಇಲಾಖೆ ಮೂಲಕ ವಿನೂತನ ಅಭಿಯಾನ ಶುಕ್ರವಾರ ಆರಂಭಿಸಲಾಗಿದೆ.

ಕರ್ಫ್ಯೂ ಆದೇಶ ಉಲ್ಲಂಘಿಸಿ ಬೀದಿಗೆ ಇಳಿದವರ ಕೈಯಲ್ಲಿ ‘ನನ್ನನ್ನು ಕ್ಷಮಿಸಿ. ನಾನು ಕೊರೋನಾ ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿದ್ದೇನೆ’ ಎಂದು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದ ಫಲಕ ಕೈಯಲ್ಲಿ ಹಿಡಿಸಿ ಫೋಟೊ ತೆಗೆಯಲಾಗುತ್ತಿದೆ. ಆ ಮೂಲಕ ಇನ್ನುಮುಂದೆ ಲಾಕ್‌ಡೌನ್ ಆದೇಶ ಉಲ್ಲಂಘಿಸದಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಮಂಗಳೂರಿನಲ್ಲಿ ಉತ್ತಮ ಸ್ಪಂದನೆ: ದೇಶಾದ್ಯಂತ ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ ಡೌನ್ ದಿನದಿಂದ ದಿನಕ್ಕೆ ಬಿಗಿಗೊಳ್ಳುತ್ತಿದ್ದು, ಮಂಗಳೂರು ನಗರದಲ್ಲಿ ಶುಕ್ರವಾರ ಲಾಕ್‌ ಡೌನ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಲಾಕ್‌ ಡೌನ್‌ನ ಮೂರನೇ ದಿನ ನಗರದ ಜನತೆ ಮನೆಯಿಂದ ಹೊರಬಾರದೇ ಸರಕಾರದ ಆದೇಶ ಪಾಲಿಸಿದ್ದಾರೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ದಿನಸಿ, ತರಕಾರಿ ಖರೀದಿಸಲು ಆಗಮಿಸುವವರ ಸಂಖ್ಯೆಯೂ ಶುಕ್ರವಾರ ಇಳಿಮುಖವಾಗಿತ್ತು. ದಿನಸಿ, ತರಕಾರಿ, ಮೆಡಿಕಲ್ ಶಾಪ್‌ಗೆ ಆಗಮಿಸುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಬರಹದ ಫಲಕಗಳನ್ನು ಅಲ್ಲಲ್ಲಿ ಅಳವಡಿಸಲಾಗಿದ್ದು, ಜನರು ಅದರಂತೆ ನಡೆದುಕೊಳ್ಳುತ್ತಿದ್ದಾರೆ. ನಗರಕ್ಕೆ ಪ್ರವೇಶಿಸುವ ವಿವಿಧ ಜಂಕ್ಷನ್‌ಗಳಲ್ಲಿ ವಾಹನ ಸಂಚಾರ ತಡೆಗೆ ಬ್ಯಾರಿಕೇಡ್ ಅಳವಡಿಸುವ ಜತೆಗೆ ಅನಗತ್ಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂಬ ಫಲಕ ಹಾಕಲಾಗಿದೆ.

ನಗರದಲ್ಲಿ ಕೆಲ ಬ್ಯಾಂಕ್‌ ಗಳು ಕಾರ್ಯನಿರ್ವಹಿಸುತ್ತಿದ್ದರೂ, ವ್ಯವಹಾರಕ್ಕೆ ಜನರು ಆಗಮಿಸಲಿಲ್ಲ. ಅಗತ್ಯವಿರುವ ಸರಕಾರಿ ಕಚೇರಿಗಳು ತೆರೆದಿದ್ದರೂ, ಸಾರ್ವಜನಿಕರ ಭೇಟಿ ಇರಲಿಲ್ಲ.

ಪಾಲನೆಯಾದ ಸಾಮಾಜಿಕ ಅಂತರ: ನಗರದ ಸೆಂಟ್ರಲ್ ಮಾರ್ಕೆಟ್‌ಗೆ ಗ್ರಾಹಕರ ಪ್ರವೇಶ ನಿಷೇಧಿಸಿದ ಬಳಿಕ ಅಲ್ಲಿ ಜನದಟ್ಟಣೆ ಕಂಡುಬಂದಿಲ್ಲ. ಎಲ್ಲೆಡೆ ಜನರು ನಿರ್ದಿಷ್ಟ ದೂರದಲ್ಲಿ ಕ್ಯೂ ನಿಲ್ಲುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.

ಟಾಸ್ಕ್‌ಫೋರ್ಸ್ ಸಹಾಯದೊಂದಿಗೆ ಎಲ್ಲ ಅಂಗಡಿಗಳನ್ನು ಮುಚ್ಚಿಸಿದ್ದಾರೆ. 12 ಗಂಟೆ ಬಳಿಕ ಯಾವುದೇ ವಾಹನ, ಜನ ಸಂಚಾರಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಕೊರೋನಾ ನಿಯಂತ್ರಣ ಸಂಬಂಧಿಸಿ ದ.ಕ. ಜಿಲ್ಲೆಗೆ ನೋಡೆಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಐಎಎಸ್

LEAVE A REPLY

Please enter your comment!
Please enter your name here