ತುಮಕೂರು: ಯಾವುದೇ ಮಹಿಳೆಯೂ ಸಹ ನನ್ನನ್ನು ತಬ್ಬಿ ಕೊಂಡು ಮುತ್ತುಕೊಟ್ಟಿಲ್ವ ಈಗಿರುವಾಗ ನಾನೇಕೆ ರಾಜಿನಾಮೇ ಕೊಡಬೇಕು ಎಂದು ಕಾನೂನು ಸಚಿವ ಮಾಧುಸ್ವಾಮಿ ಮಾಜಿ ಮುಖ್ಯಮಂತ್ರಿ ಗಳನ್ನು ಪ್ರಶ್ನೆ ಮಾಡಿದರು.
ಕೋಲಾರವಿಶೇಷ ಘಟನೆಗೆ ಸಂಬಂಧಪಟ್ಟಂತೆ ತಮ್ಮ ರಾಜಿನಾಮೆಗೆ ಒತ್ತಾಯ ಮಾಡಿರು ವಿಪಕ್ಷನಾಯಕರಿಗೆ ಅವರು ಟಾಂಗ್ ನೀಡಿದರು.
ನಾನು ಯಾವುದೇ ತಪ್ಪು ಮಾಡಿಲ್ಲ ಅದ್ದರಿಂದ ರಾಜಿನಾಮೇಯೂ ಇಲ್ಲ ಕ್ಷಮೆಯೂ ಇಲ್ಲ ಎಂದ ಅವರು ಮಹಿಳೆಯರ ಬಗ್ಗೆ ತಮಗೆ ಅಪಾರ ಗೌರವವಿದೆ.ಇಲ್ಲಿ ಆ ಮಹಿಳೆಯ ವರ್ತನೆಯಿಂದ ಆಕೆಯನ್ನು ಕುರಿತು ನಾನು ಆ ಮಾತು ಆಡಿದ್ಧೇನೇ ಅಷ್ಟಕ್ಕೂ ಆ ಪದವೇನೂ ಅಸಭ್ಯವಾದುದಲ್ಲ ಎಂದರು. ಒಬ್ಬ ಮಹಿಳೆಯ ಬಗ್ಗೆ ಆಡಿದ ಮಾತನ್ನು ಮಹಿಳೆಯರ ಸಮುದಾಯ ಕ್ಕೆ ಅನ್ವಯಿಸುವುದು ಸರಿಯಲ್ಲ .ಅಷ್ಟಕ್ಕೂ ಈ ಮಾತಿನಿಂದ ಮಹಿಳಾಸಮುದಾಯಕ್ಕೆ ನೋವಾಗಿದ್ದರೆ ಮಹಿಳಾ ಸಮುದಾಯದ ಕ್ಷಮೆ ಯಾಚಿಸುವೆನೆ ವಿನಹ ಸದರಿ ಮಹಿಳೆಯನ್ನಲ್ಲ ಎಂದರು.