ಹೊಸದಿಗಂತ ಆನ್ಲೈನ್ ಡೆಸ್ಕ್:
ತಮ್ಮ ಆಡಳಿತದ ನೂರು ದಿನದಲ್ಲಿ ಹತ್ತು ಕೋಟಿ ಜನರಿಗೆ ಕೋವಿಡ್ ಲಸಿಕೆ ಹಾಕಿಸುತ್ತೇನೆ ಎಂದು ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಕಾಡುತ್ತಿರುವ ಬಹುದೊಡ್ಡ ಬಿಕ್ಕಟ್ಟು ಕೊರೋನಾ, ಇದನ್ನು ಬಗೆಹರಿಸುವ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಅಮೆರಿಕದಲ್ಲಿ ಕೋವಿಡ್ ಲಸಿಕೆ ಹಾಕುವ ವಿಚಾರದಲ್ಲಿ ಇಲ್ಲಿವರೆಗೂ ಸಮರ್ಪಕವಾದ ಕೆಲಸಗಳು ನಡೆದಿಲ್ಲ. ಇದೊಂದು ವೈಫಲ್ಯ. ನಮ್ಮ ಆಡಳಿತದ ನೂರು ದಿನಗಳ ಒಳಗೆ 10 ಕೋಟಿ ಅಮೆರಿಕನ್ನರಿಗೆ ಲಸಿಕೆ ಹಾಕಿಸುವ ಗುರಿಯೂ ಒಂದು ಎಂದು ಹೇಳಿದರು.