ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಹಿನ್ನಲೆಯಲ್ಲಿ ಕಂಗನಾ ರಣಾವತ್ ಧ್ವನಿಯೆತ್ತಿದ್ದರು. ಇದು ಆತ್ಮಹತ್ಯೆಯಲ್ಲ ಎಂದು ಕೂಗಿ ಹೇಳಿದ್ದರು. ಸದಾ ಏನಾದರೂ ವಿವಾದದಲ್ಲಿ ಸಿಲುಕುವ ಕಂಗನಾ ಈ ಬಾರಿ ಹೇಳಿಕೆ ನೀಡಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
ಬಾಲಿವುಡ್ನಲ್ಲಿರುವ ನೆಪೋಟಿಸಂನಿಂದ ಬಹಳ ಉದಯೋನ್ಮುಖ ನಟರಿಗೆ ಅನ್ಯಾಯವಾಗಿದೆ. ಈ ವಿಷಯ ಸುಳ್ಳಾದರೆ ತನಗೆ ದೊರೆತಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡುವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಮಂದಿ ಈ ಆರೋಪಗಳೆಲ್ಲ ಸುಳ್ಳು ಎಂದು ತಳ್ಳಿಹಾಕಿದ್ದರು. ಆದರೆ ಕಂಗನಾ ಮಾತ್ರ ತಮ್ಮ ನಿಲುವಿನಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ.