Tuesday, August 16, 2022

Latest Posts

ನನ್ನ ಟ್ವೀಟ್‌ಗಳನ್ನು ಹಿಂದಕ್ಕೆ ಪಡೆಯುವುದಿಲ್ಲ, ಕ್ಷಮೆ ಯಾಚಿಸುವುದಿಲ್ಲ: ಕುನಾಲ್‌ ಕಮ್ರಾ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅರ್ನಬ್ ‌ ಗೋಸ್ವಾಮಿ ಪ್ರಕರಣದ ನಂತರ ಕುನಾಲ್‌ ಕಮ್ರಾ ನ್ಯಾಯಾಂಗ ನಿಂದನೆ ಪ್ರಕರಣ ದೇಶದಲ್ಲಿ ಸದ್ದು ಮಾಡುತ್ತಿದೆ. ಭಾರತದ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಕುನಾಲ್‌ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ಅನುಮತಿ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ಕುನಾಲ್‌ ಕಮ್ರಾ ತಮ್ಮ ಮೊಟ್ಟ ಮೊದಲ ಪ್ರತಿಕ್ರಿಯೆಯನ್ನು ಫೇಸ್‌ಬುಕ್‌ ಮೂಲಕ ನೀಡಿದ್ದಾರೆ.
‘ನನ್ನ ಅಭಿಪ್ರಾಯ ಬದಲಾಗಿಲ್ಲ, ಯಾಕಂದ್ರೆ, ಇನ್ನೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ವಿಷಯದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮೌನವು ಟೀಕೆಗೊಳಗಾಗಲಾರದು. ನನ್ನ ಟ್ವೀಟ್ʼಗಳನ್ನ ಹಿಂದಕ್ಕೆ ಪಡೆಯುವ ಅಥವಾ ಅವರ ಕ್ಷಮೆ ಯಾಚಿಸುವ ಉದ್ದೇಶ ನನಗಿಲ್ಲ. ಅವರು ನನ್ನ ಪರವಾಗಿ ಮಾತನಾಡುತ್ತಾರೆ ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ. ಇನ್ನು ‘ವಕೀಲರು ಇಲ್ಲ, ಕ್ಷಮೆ ಇಲ್ಲ, ದಂಡವಿಲ್ಲ, ಜಾಗ ವ್ಯರ್ಥವಿಲ್ಲ’ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಇನ್ನೂ ಮನವಿಗಳನ್ನು ಕೈಗೆತ್ತಿಕೊಂಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss