Thursday, August 11, 2022

Latest Posts

ನನ್ನ ತಾಯಿ ಪ್ರತಿ ಬಾರಿ ಕರೆ ಮಾಡಿದಾಗಲೂ ಈ ಪ್ರಶ್ನೆ ಕೇಳೇ ಕೇಳುತ್ತಾರೆ!: ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ಸಮಯದಲ್ಲಿ ಅಮ್ಮನ ಜೊತೆ ಮಾತನಾಡಲು ನನಗೆ ಸಮಯ ಸಿಗುತ್ತಿಲ್ಲ, ಸಮಯ ಸಿಕ್ಕಾಗಲೆಲ್ಲ ಮಾತನಾಡುತ್ತೇನೆ, ಪ್ರತಿ ಬಾರಿ ಕರೆ ಮಾಡಿದಾಗಲೂ ಅಮ್ಮ ಒಂದೇ ಪ್ರಶ್ನೆ ಕೇಳುತ್ತಾರೆ, ಹಳದಿ ಹಾಲು ಕುಡಿದೆಯಾ ಎಂದು ಪ್ರಧಾನಿ ಮೋದಿ ಹೇಳಿದರು.
ಫಿಟ್ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಫಿಟ್ನೆಸ್ ದಿಗ್ಗಜರ ಜೊತೆ ಸಂವಾದದಲ್ಲಿ ಮಾತನಾಡಿದರು.
ರುಜುತಾ ದಿವೇಕರ್ ಅವರಿಗೆ ಅರಿಶಿಣದ ಮಹತ್ವದ ಬಗ್ಗೆ ಹೇಳಿದರು. ನಮ್ಮದೇ ದೇಶದಲ್ಲಿ ಔಷಧೀಯ ಗುಣಗಳಿರುವ ಪದಾರ್ತಗಳು ಸಾಕಷ್ಟಿವೆ ಎಂದರು. ಇಷ್ಟೆಲ್ಲಾ ಒಳ್ಳೆ ಪದಾರ್ಥಗಳಿದ್ದರೂ ನಾವು ಬೇರೆ ಆಹಾರಗಳಿಗೆ ಪ್ರಭಾವಿತರಾಗಿದ್ದೇವೆ, ಇದೀ ಅರಿಶಿಣ ಹಾಲನ್ನು ಬೇರೆ ದೇಶದವರು ಕೊಟ್ಟರೆ ಚೆನ್ನಾಗಿದೆ ಎನ್ನುತ್ತಾರೆ. ಆಗ ಅರಿಶಿಣ ಹಾಲು ಕುಡಿಯುವುದು ಮುಖ್ಯ ಎನಿಸುತ್ತದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss