ಸುಶಾಂತ್ ಪ್ರೇಯಸಿ ರಿಯಾ ವಿರುದ್ಧ ಹಲವು ಅನುಮಾನ ಹುಟ್ಟು ಹಾಕಿದೆ. ಸುಶಾಂತ್ ಸಾಯುವ ಕೆಲ ದಿನಗಳ ಹಿಂದಷ್ಟೆ ರಿಯಾ ಸುಶಾಂತ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ವಿಷಯಗಳು ಹೊರಬಂದಿವೆ. ಇದೀಗ ರಿಯಾಳ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ’ನನ್ನ ಬಾಯ್ಫ್ರೆಂಡ್ ನನ್ನ ಕೈಗೊಂಬೆ, ಆತನನ್ನು ಹೇಗೆ ಬೇಕಾದರೂ ಆಟವಾಡಿಸುತ್ತೇನೆ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ಎಲ್ಲಡೆ ವೈರಲ್ ಆಗಿದೆ. ಆದರೆ ಈ ವಿಡಿಯೋವನ್ನು ಯಾವಾಗ ಮಾಡಿದ್ದು ಎಂಬುವುದರ ಬಗ್ಗೆ ಮಾಹಿತಿಯಿಲ್ಲ. ಕಪ್ಪು ಬಣ್ಣದ ಬಟ್ಟೆ ‘ಧರಿಸಿ ರಿಯಾ ಚೇರ್ ಮೇಲೆ ಕುಳಿತು, ’ನನಗೆ ಜನರನ್ನು ಮ್ಯಾನ್ಯುಪಲೇಟ್ (ಅವಕಾಶಕ್ಕೆ ತಕ್ಕಂತೆ ಬಳಸಿಕೊಳ್ಳುವುದು) ಗೊತ್ತು. ನನ್ನ ಬಾಯ್ಫ್ರೆಂಡ್ ತಾನೊಬ್ಬ ದೊಡ್ಡ ಡಾನ್ ಎಂದುಕೊಂಡಿದ್ದಾನೆ, ಆದರೆ ನಾನೂ ಅವನನ್ನೂ ಹ್ಯಾಂಡಲ್ ಮಾಡುತ್ತೇನೆ’ ಎನ್ನುತ್ತಾರೆ ರಿಯಾ.
ನನ್ನ ಬಾಯ್ಫ್ರೆಂಡ್ ತಾನೊಬ್ಬ ರೌಡಿ ಎಂದುಕೊಂಡಿದ್ದಾನೆ. ಆದರೆ ನಾನು ’ತಾಯ್’ ಇದ್ದಂತೆ. ನಾನು ಅಂಥಹಾ ರೌಡಿಗಳಿಗಳಿಂದ ಗೂಂಡಾಗಿರಿ ಮಾಡಿಸುವ ಛಾತಿ ಉಳ್ಳವಳು. ನನ್ನ ಬಾಯ್ಫ್ರೆಂಡ್ ಅನ್ನು ಕರೆಯುತ್ತೇನೆ. ನೋಡು ಆ ನಿರ್ಮಾಪಕನಿಂದ ವಸೂಲಿ ಮಾಡಿಕೊಂಡು ಬಾ ಎಂದು ಕಳಿಸುತ್ತೀನಿ. ಅವನು ಮಾಡಿಕೊಂಡು ಬರುತ್ತಾನೆ’ ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ.ರಿಯಾ ಅವರ ಈ ವಿಡಿಯೋ ಸುಶಾಂತ್ ಸಾವಿಗೆ ಮುಂಚಿನದ್ದಾ ಅಥವಾ ಸುಶಾಂತ್ ಸಿಂಗ್ ಸಾವಿನ ನಂತರದ್ದಾ ಗೊತ್ತಿಲ್ಲ. ವಿಡಿಯೋದಲ್ಲಿ ಜೋರಾಗಿ ನಗುತ್ತಿರುವ ‘ಧ್ವನಿ ಹಿನ್ನೆಲೆಯಲ್ಲಿ ಕೇಳುತ್ತದೆ. ಆ ಧ್ವನಿ ಸುಶಾಂತ್ರದ್ದೇ ಎನ್ನಲಾಗುತ್ತಿದೆ. ವಿಡಿಯೋದ ಕೊನೆಯಲ್ಲಿ ವಿಡಿಯೋ ರೆಕಾರ್ಡ್ ಮಾಡಬೇಡ ಎಂದು ರಿಯಾ ಹೇಳುತ್ತಾರೆ ಕೂಡಲೇ ವಿಡಿಯೋ ಬಂದ್ ಆಗುತ್ತದೆ.
ವೈರಲ್ ಆಗಿರುವ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಯಾ, ಅದು ನಾನು ಸ್ಟಾಂಡಪ್ ಕಾಮಿಡಿ ಮಾಡುತ್ತಿರುವ ವಿಡಿಯೋ. ನನಗೆ ಸ್ಟ್ಯಾಂಡ್ ಅಪ್ ಕಾಮಿಡಿ ಇಷ್ಟ. ನಾನು ’ತಾಯ್’ ಎಂದಿರುವುದು ಅದು ನಾನೇ ಸ್ಟಾಂಡ್ ಅಪ್ ಕಾಮಿಡಿಗೆ ಸೃಷ್ಟಿಸಿರುವ ಪಾತ್ರ ಎಂದಿದ್ದಾರೆ.