ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸಿಎಂಗೆ ಸಾಕಷ್ಟು ಒತ್ತಡಗಳಿರುವುದರಿಂದ ನನ್ನಿಂದ ರಾಜೀನಾಮೆ ಪಡೆದಿದ್ದಾರೆ. ನನ್ನ ಬೆಂಬಲ ಅಗತ್ಯವಿದೆ ಎಂದು ಮಾಜಿ ಸಚಿವ ಹೆಚ್.ನಾಗೇಶ್ ತಿಳಿಸಿದರು.
ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಾನೂ ಅಚನಕ್ಕಾಗಿ ಶಾಸಕನಾದವನು. ಒಂದೊಳ್ಳೆ ಅವಕಾಶ ಸಿಕ್ಕಿದ್ದಕ್ಕೆ ಸಚಿವನೂ ಆದೆ. ಬಿಜೆಪಿ ಸರ್ಕಾರ ರಚನೆಯಾದಾಗ ಒಳ್ಳೆಯ ಖಾತೆ ಕೊಟ್ಟರು. ಅದಕ್ಕೆ ನಾನು ಸಿಎಂಗೆ ಆಭಾರಿ ಎಂದರು.
ನನಗೆ ಈಗಲೂ ಸಿಎಂ ಮಾತು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ನೀಡುವುದಾಗಿ ಸಿಎಂ ಹೇಳಿದ್ದಾರೆ. ಮಾತು ಕೊಟ್ಟರೆ ಅವರು ಉಳಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ನನಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿ ಸಿಕ್ಕಿರುವುದು ತೃಪ್ತಿ ತಂದಿದೆ. ರಾಜ್ಯಾದ್ಯಂತ ಸಮುದಾಯದ ಜನರ ಸೇವೆ ಮಾಡುತ್ತೇನೆ. ಜೊತೆಗೆ ಯಾರೇ ಜಿಲ್ಲಾ ಉಸ್ತುವಾರಿ ಸಚಿವರಾದರು ಅವರಿಗೆ ನನ್ನ ಬೆಂಬಲ ನೀಡುವುದಾಗಿ ಹೇಳಿದರು.