Wednesday, August 17, 2022

Latest Posts

ನನ್ನ ವೃತ್ತಿ ಜೀವನವೇ ಬೇರೆ, ಡ್ರಗ್ಸ್ ಗೂ ನನಗೂ ಸಂಬಂಧವಿಲ್ಲ: ಐಎಸ್ ಡಿ ವಿಚಾರಣೆ ಬಳಿಕ ಕ್ರಿಕೆಟಿಗ ಅಯ್ಯಪ್ಪ ಮಾತು

ಬೆಂಗಳೂರು: ಐಎಸ್ ಡಿ ನೀಡಿದ್ದ ನೋಟಿಸ್ ನೋಡಿ ಶಾಕ್ ಆಯ್ತು. ಆದರೆ ವಿಚಾರಣೆ ನಂತ್ರ ಸರಿ ಹೋಯಿತು ಎಂಬುದಾಗಿ ಬಿಗ್ ಬಾಸ್ ಸ್ಪರ್ಧಿ, ಕ್ರಿಕೆಟಿಗ ಅಯ್ಯಪ್ಪ ತಿಳಿಸಿದ್ದಾರೆ.
ಐ ಎಸ್ ಡಿ ನೋಟಿಸ್ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳ ಹಿಂದೆ ನನಗೆ ನೋಟಿಸ್ ಬಂದಿತ್ತು. ನೋಟಿಸ್ ಬಂದ ತಿಳಿಸಿದ ಸಮಯಕ್ಕೆ ವಿಚಾರಣೆಗೆ ಹಾಜರಾಗಿದ್ದೇನೆ. ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ಎಂದರು.
ನನ್ನ ವೃತ್ತಿ ಜೀವನವೇ ಬೇರೆಯಾಗಿದೆ. ಡ್ರಗ್ಸ್ ಗೂ ನನಗೂ ಸಂಬಂಧವಿಲ್ಲ. ಮದುವೆಯ ಬಳಿಕ ನಾನು ಯಾವುದೇ ಪಾರ್ಟಿಗಳನ್ನು ಮಾಡಿಲ್ಲ. ನಾನು ಪಾರ್ಟಿ ನೋಡಿದ್ದೇನೆ ವಿನಹ, ಡ್ರಗ್ ಪಾರ್ಟಿ ನೋಡಿಲ್ಲ. ನಾವು ಬ್ಯಾನ್ ಆದ ಯಾವುದೇ ವಸ್ತುಗಳನ್ನು ಸೇವಿಸೋದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!