Sunday, June 26, 2022

Latest Posts

ನನ್ನ ಹೆಸರಿನಲ್ಲಿ ಪೂಜೆ ಬೇಡ ..ನಾಡಿಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿ: ಸಿದ್ದರಾಮಯ್ಯ

ದಿಗಂತ ವರದಿ ಬಾಗಲಕೋಟೆ :

ವಿಧಾನಸಭೆಯ ವಿರೋಧ ಪಕ್ಷದ ನಾಯಕ ,ಬಾದಾಮಿ‌ ಮತಕ್ಷೇತ್ರದ ಸಿದ್ದರಾಮಯ್ಯ ಅವರು ಶುಕ್ರವಾರ ಇತಿಹಾಸ ಪ್ರಸಿದ್ಧ ಬಾದಾಮಿಯ ಬನಶಂಕರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹಾಜರಿದ್ದರು.
ಅರ್ಚಕರು ತಮ್ಮ‌ ಹೆಸರಿನಲ್ಲಿ ಪೂಜೆ ಸಲ್ಲಿಸಿದ್ದೇವೆ ಎನ್ನುತ್ತಿದ್ದಂತೆ ನನ್ನ ಹೆಸರಿನಲ್ಲಿ ಪೂಜೆ ಮಾಡಬೇಡಿಪ ರಾಜ್ಯದ ಜನರು ನೆಮ್ಮದಿಯಾಗಿರಬೇಕು, ನಾಡಿಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿ ಎಂದು ಸಿದ್ದರಾಮಯ್ಯ ಹೇಳಿದರು.
ಬಾದಾಮಿಯ 2ನೇ ದಿನದ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ ಬನಶಂಕರಿದೇವಿ ದೇವಸ್ಥಾನಕ್ಕೆ ತೆರಳಿ ಆಶಿರ್ವಾದ ಪಡೆದರು. ಈ ವೇಳೆ ಡಿಸಿಎಂ‌ ಗೋವಿಂದ ಕಾರಜೋಳ ಕೂಡ ಸಿದ್ದರಾಮಯ್ಯ ಅವರೊಂದಿಗೆ ದೇವಿಯ ದರ್ಶನ ಪಡೆದುಕೊಂಡರು.
ಈ ದೇಳೆ ದೇವಸ್ಥಾನದ ಅರ್ಚಕರು, ಸಾಹೇಬ್ರ ನಿಮ್ಮ ಹೆಸರಿನಲ್ಲಿ ಪೂಜೆ ಮಾಡಿದ್ದೇವೆ. ಪ್ರಸಾದ ಕೊಟ್ಟು‌ಕಳಿಸುತ್ತೇವೆ ಎಂದರು. ಆಗ ಸಿದ್ದರಾಮಯ್ಯ ನವರು ನಾಡಿಗೆ ಹಾಗೂ ಜನರಿಗೆ ಒಳ್ಳೆಯದಾಗಲಿ ಎಂದು ಪೂಜೆ‌‌ಮಾಡಿ,‌ನನ್ನ ಹೆಸರಿನಲ್ಲಿ ಬೇಡ ಎಂದರು.
ಬಳಿಕ ಬನಶಂಕರಿ ದೇವಸ್ಥಾನ, ಪುಷ್ಕರಣಿ ಸುತ್ತಲಿನ ತಿರುವ ರಸ್ತೆ ಅಭಿವೃದ್ಧಿ, ಬೀದಿ ದೀಪ ಅಳವಡಿಕೆಯ 3.19 ಕೋಟಿ ವೆಚ್ಚದ ಕಾಮಗಾರಿಗೆ ಡಿಸಿಎಂ ಗೋವಿಂದ ಕಾರಜೋಳ‌ ಮತ್ತು ಸಿದ್ದರಾಮಯ್ಯ ಒಟ್ಟಾಗಿ ಚಾಲನೆ ನೀಡಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss