Thursday, January 28, 2021

Latest Posts

ನಭದಲ್ಲಿ ಹೊಸ ಬೆಳವಣಿಗೆ: ಕಕ್ಷೆಬಿಟ್ಟು ಹೊರಕ್ಕೆ ಸಾಗುತ್ತಿದೆ ಮಂಗಳಗ್ರಹ…

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಂಗಳಗ್ರಹ ತನ್ನ ಕಕ್ಷೆಯನ್ನು ಬಿಟ್ಟು ಹೊರಬರುತ್ತಿದ್ದು, ಇದನ್ನು ಖುದ್ದು  ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿ  ಖಚಿತಪಡಿಸಿದ್ದಾರೆ.
ಮಂಗಳ ಗ್ರಹವು ಪ್ರತಿ ೨೦೦ ದಿನಗಳಿಗೊಮ್ಮೆ ಸುಮಾರು ೪ ಇಂಚುಗಳಷ್ಟು ದೂರ ಕಕ್ಷೆಯಿಂದ ಹೊರ ನಡೆಯುತ್ತಿದೆ. ಇದನ್ನು ಅಮೆರಿಕನ್ ಜಿಯೋಫಿಸಿಕಲ್ ಯೂನಿಯನ್ ನಡೆಸಿದ ಅಧ್ಯಯನ ಖಚಿತಪಡಿಸಿದೆ. ಈ ಬೆಳವಣಿಗೆ ಯಾವುದರಿಂದಾಗುತ್ತಿದೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
ಇದೇ ಮೊದಲಲ್ಲ…
ಗ್ರಹಗಳು ತನ್ನ ಕಕ್ಷೆ ಬಿಡುವುದು ಇದೇ ಮೊದಲೇನಲ್ಲ. ಭೂಮಿ ಕೂಡಾ ಈಗಾಗಲೇ ತನ್ನ ಕಕ್ಷೆಯಿಂದ ಸುಮಾರು ೩೦ ಅಡಿ ದೂರಕ್ಕೆ ಸರಿದಿದೆ. ಅಲ್ಲದೆ ಪ್ರತಿ ೪೩೩ ದಿನಕ್ಕೊಮ್ಮೆ ಕಕ್ಷೆಯಿಂದ ಇನ್ನೂ ಸ್ವಲ್ಪ ಹೊರಗೆ ನಡೆಯುತ್ತಲೇ ಇದೆ. ಇದಕ್ಕೆ ಕಾರಣವಾಗಿರುವುದು ಇಲ್ಲಿನ ಸಮುದ್ರದ ಒತ್ತಡ, ವಾತಾವರಣದಲ್ಲಿನ ಏರುಪೇರು. ಆದರೆ ಮಂಗಳ ಗ್ರಹದಲ್ಲಿ ಯಾವುದೇ ಸಮುದ್ರವಿಲ್ಲ. ಹಾಗಿದ್ದರೂ ಇದು ಪ್ರತಿ ೨೦೦ ದಿನಕ್ಕೆ ಕಕ್ಷೆಯಿಂದ ಹೊರಗೆ ಧಾವಿಸುತ್ತಿರುವುದು ಯಾಕೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ.
ಈ ಪ್ರಕ್ರಿಯೆಯನ್ನು ದಿ ಚಾಂಡ್ಲರ್ ವೊಬಲ್ ಎಂದು  ಹೇಳಲಾಗುತ್ತದೆ. ಖಗೋಳ ವಿಜ್ಞಾನಿ ಸೇಥ್ ಕಾರ್ಲೊ ಚಾಂಡ್ಲರ್ ಸುಮಾರು ಒಂದು ಶತಮಾನದ ಹಿಂದೆ ಈ ಪ್ರಕ್ರಿಯೆಯನ್ನು ಕಂಡುಹಿಡಿದಿದ್ದರು. ಇದರಿಂದಾಗಿ ಇದಕ್ಕೆ ಅವರ ಹೆಸರನ್ನೇ ಇಡಲಾಗಿದೆ. ಇದೊಂದು ಸಾಮನ್ಯ ಸಂಗತಿ ಎನ್ನಲಾಗಿದ್ದು, ಒಂದಷ್ಟು ಅವಧಿಯ ಬಳಿಕ ಗ್ರಹಗಳು ತನ್ನಿಂತಾನಾಗೇ ಈ ಪ್ರಕ್ರಿಯೆಯಿಂದ ಚೇತರಿಸಿಕೊಂಡು ಸರಿಯಾಗುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!