Tuesday, August 16, 2022

Latest Posts

ನಮಾಮಿ ಗಂಗೆ| ಆರು ಬೃಹತ್ ಯೋಜನೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ಹೊಸದಿಲ್ಲಿ: ನಮಾಮಿ ಗಂಗೆ ಯೋಜನೆ ಅಡಿಯಲ್ಲಿ 6 ಬೃಹತ್ ಯೋಜನೆಗಳೀಗೆ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಲ್ ಜೀವನ್ ಮಿಷನ್ ನ ಲಾಂಛನ ಬಿಡುಗಡೆ ಮಾಡಲಿದ್ದಾರೆ.

ನಮಾಮಿ ಗಂಗೆ ಯೋಜನೆಯಡಿಯಲ್ಲಿ ದಿನಕ್ಕೆ 68 ಮಿಲಿಯನ್ ಲೀಟರ್ (ಎಂಎಲ್‌ಡಿ) ಒಳಚರಂಡಿ ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಾಣ, ಹರಿದ್ವಾರದ ಜಗ್ಜೀತ್‌ಪುರದಲ್ಲಿ ಅಸ್ತಿತ್ವದಲ್ಲಿರುವ 27 ಎಂಎಲ್‌ಡಿ ಎಸ್‌ಟಿಪಿ ನವೀಕರಣ ಮತ್ತು ಸಾರೈನಲ್ಲಿ 18 ಎಂಎಲ್‌ಡಿ ಎಸ್‌ಟಿಪಿ ನಿರ್ಮಾಣ ಸೇರಿವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಹರಿದ್ವಾರದ ಚಾಂಡಿ ಘಾಟ್‌ನಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ನದಿಯ ಸಂಸ್ಕೃತಿ, ಜೀವವೈವಿಧ್ಯತೆ ಮತ್ತು ನವ ಯೌವನ ಪಡೆಯುವ ಚಟುವಟಿಕೆಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿರುವ ಗಂಗಾದ ಮೊದಲ ವಸ್ತುಸಂಗ್ರಹಾಲಯವಾದ ‘ಗಂಗಾ ಅವಲೋಕನ್’ ಅನ್ನು ಅವರು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss