ನಮ್ಮನ್ನು ಸ್ವದೇಶಕ್ಕೆ ಕರೆಸಿಕೊಳ್ಳಿ: ದುಬೈ, ಅಬುಧಾಬಿಯ ಕನ್ನಡಿಗರಿಂದ ಮೊರೆ

0
48

ದುಬೈ:ಕೊರೋನಾ ವೈರಸ್ ಪಿಡುಗಿನ ಹಿನ್ನೆಲೆಯಲ್ಲಿ ದುಬೈ ಮತ್ತು ಅಬುಧಾಬಿಯಲ್ಲಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿರುವ 178 ಕ್ಕೂ ಹೆಚ್ಚಿನ ಭಾರತೀಯರು ತಮ್ಮನ್ನು ಸ್ವದೇಶಕ್ಕೆ ಕರೆಸಿಕೊಳ್ಳುವಂತೆ ಭಾರತೀಯ ರಾಯಭಾರ ಕಚೇರಿ ಮತ್ತು ಕಾನ್ಸುಲ್ ಜನರಲ್ ಅವರ ಮೂಲಕ ಭಾರತ ಸರಕಾರಕ್ಕೆ ಮೊರೆಯಿಟ್ಟಿದ್ದಾರೆ. ಇವರಲ್ಲಿ ಬಹುತೇಕರು ಕನ್ನಡಿಗರು ಮತ್ತು ಕರಾವಳಿಯ ನಾಗರಿಕರಾಗಿದ್ದಾರೆ. ಇವರಲ್ಲಿ ಕೆಲವು ಗರ್ಭಿಣಿ ಮಹಿಳೆಯರೂ ಒಳಗೊಂಡಿದ್ದಾರೆ.
ಕೋವಿಡ್-19ರ ದೆಸೆಯಿಂದಲಾಗಿ ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ .ಕೆಲವು ಮಂದಿ ಗರ್ಭಿಣಿಯರಿದ್ದು ಇನ್ನು ಕೆಲವರು ವೈದ್ಯಕೀಯ ಕಾರಣಕ್ಕೆ ತುರ್ತು ನೆಲೆಯಲ್ಲಿ ಸ್ವದೇಶಕ್ಕೆ ಆಗಮಿಸಬೇಕಾಗಿ ಬಂದಿದೆ. ಅನೇಕರು ಕೆಲವು ತಿಂಗಳುಗಳಿಂದ ಉದ್ಯೋಗ ಅಥವಾ ಆದಾಯವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ತಮ್ಮನ್ನು ವಂದೇ ಭಾರತ್ ಮಿಷನ್‌ನಡಿ ದುಬೈ ಮತ್ತು ಅಬುಧಾಬಿಯಿಂದ ಮಂಗಳೂರು ಮತ್ತು ಬೆಂಗಳೂರಿಗೆ ಕರೆತರಲು ವ್ಯವಸ್ಥೆ ಮಾಡಬೇಕೆಂದು ಈ ಭಾರತೀಯರು ಮೊರೆಯಿಟ್ಟಿದ್ದಾರೆ . ಇದಕ್ಕಾಗಿ ಯುಎಇಯಿಂದ ಹೆಚ್ಚುವರಿ ವಿಮಾನಗಳನ್ನು ವ್ಯವಸ್ಥೆ ಮಾಡಬೇಕೆಂದು ಕೋರಿ ಅವರು ಅಬುಧಾಬಿಯಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈಯಲ್ಲಿನ ಕಾನ್ಸುಲೇಟ್ ಜನರಲ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.ಈ ಕುರಿತ ಮನವಿ ಪತ್ರಗಳನ್ನು ರಾಯಭಾರಿ ಎಚ್.ಇ.ಪವನ್ ಕಪೂರ್, ಕಾನ್ಸುಲ್ ಜನರಲ್ ಶ್ರೀ ವಿಪುಲ್, ಕಾನ್ಸುಲ್ ಪಂಕಜ್ ಬೊಡ್ಕೆ ಮತ್ತಿತರರಿಗೆ ಸಲ್ಲಿಸಲಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ. ಈ ಪತ್ರಗಳನ್ನು ಈ ಕನ್ನಡಿಗರು “ಹೊಸದಿಗಂತ “ಕ್ಕೂ ಕಳುಹಿಸಿಕೊಟ್ಟಿದ್ದು, ಸಂಬಂಸಿದ ಕರಾವಳಿಯ ಜನಪ್ರತಿನಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಿ ನಮಗೆ ನೆರವಾಗಬೇಕೆಂದು ಕೋರಿದ್ದಾರೆ.

LEAVE A REPLY

Please enter your comment!
Please enter your name here