ಹೊಸ ದಿಗಂತ ವರದಿ ಕೋಲಾರ:
ನಾನು ಮುಖ್ಯಮಂತ್ರಿಯ ಮಗನಾಗಿದ್ದರೂ, ನನ್ನ ತಂದೆ ಯಾವತ್ತೂ ನಮಗೆ ಕೆಟ್ಟ ಬುದ್ದಿ ಹೇಳಿಕೊಟ್ಟಿಲ್ಲ, ಹೀಗಾಗಿ ನಾನು ನಾಲ್ಕು ಬಾರಿ ಸೋತಿದ್ದೇನೆ ಎಂದು ಸಿಎಂ ಪುತ್ರ ವಿಜಯೇಂದ್ರ ಅವರಿಗೆ ಕೋಲಾರದಲ್ಲಿ ಜೆಡಿಎಸ್ ನಾಯಕ ಮಧುಬಂಗಾರಪ್ಪ ಟಾಂಗ್ ನೀಡಿದರು.
ನಗರಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಶಿರಾ ಉಪಚುನಾವಣೆ ಹಾಗು ಸಿಎಂ ಪುತ್ರನ ಸ್ಪೀಡ್ ಕುರಿತು ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ನಮ್ಮ ತಂದೆಯವರು ಬಹಳ ಒಳ್ಳೆಯ ಬುದ್ದಿ ಹೇಳಿಕೊಟ್ಟಿದ್ದು, ಸ್ಪೀಡ್ ಎನ್ನುವುದು ನಿಯತ್ತಾಗಿ ಹೋಗಬೇಕು, ಸಾಮಾನ್ಯ ಮಕ್ಕಳಿಂದ ಹಿಡಿದು ಮುಖ್ಯಮಂತ್ರಿಗಳ ಮಕ್ಕಳವರೆಗೂ ಸ್ಪೀಡ್ ಎನ್ನುವುದು ಅಡ್ಡದಾರಿ ಹಿಡಿಯಬಾರದು ಎಂದು ಮಾರ್ಮಿಕವಾಗಿ ನುಡಿದರು.
ನಮ್ಮ ತಂದೆ ನನಗೆ ಕೆಟ್ಟ ಬುದ್ದಿ ಹೇಳಿಕೊಟ್ಟಿದ್ದರೆ ಎಲ್ಲಾ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದೆ ಎಂದ ಅವರು, ಶಿರಾ ಉಪಚುನಾವಣೆಯಲ್ಲಿ ದುಡ್ಡು ಬಹಳ ಕೆಲಸ ಮಾಡಿದೆ ಎಂದು ಹೇಳಿದರು.
ಕಾಂಗ್ರೇಸ್ ಸೇರ್ಪಡೆ ಕುರಿತು ತಳ್ಳಿ ಹಾಕಿದ ಅವರು, ಡಿಕೆಶಿ ಹಾಗೂ ಕುಮಾರಸ್ವಾಮಿ ನನಗೆ ಎರಡು ಕಣ್ಣು ಇದ್ದಂತೆ, ಡಿಕೆಶಿ ಅವರು ನಮ್ಮ ತಂದೆಯ ಅನುಯಾಯಿಗಳಾಗಿರುವ ಕಾರಣ ಡಿಕೆಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದಾಗಿನಿಂದಲೂ ನನ್ನನ್ನು ಕಾಂಗ್ರೆಸ್ಗೆ ಆಹ್ವಾನಿಸುತ್ತಿದ್ದಾರೆ, ನಾನು ಕಾಂಗ್ರೇಸ್ಗೆ ಹೋಗುತ್ತೇನೆ ಅನ್ನೋದು ಸಂಪ್ರದಾಯವಾಗಿದೆ ಎಂದು ಹೇಳಿದರು.