Thursday, August 11, 2022

Latest Posts

ನಮ್ಮ ಮನಸನ್ನು ಹೇಗೆ ಖುಷಿಯಾಗಿ ಇಡುವುದು? ಮಾನಸಿಕವಾಗಿ ಕುಗ್ಗಿದರೆ ಏನೆಲ್ಲಾ ಮಾಡಬೇಕು ತಿಳಿಯಿರಿ..

ಕೆಲವೊಮ್ಮೆ ನಮ್ಮ ಜೀವನದಲ್ಲಿ ಮಹತ್ವದ ಘಟನೆಗಳಿಂದ ನಾವು ಮಾನಸಿಕವಾಗಿ ಕುಗ್ಗಿ ಹೋಗಿರುತ್ತೇವೆ. ಆದರೆ ಮನಸ್ಸಿನ ಆ ನೋವನ್ನು, ತೊಳಲಾಟಗಳನ್ನು ಮತ್ತೊಬ್ಬರ ಬಳಿ ಹೇಳಿಕೊಳ್ಳಲು ಆಗದ ಸಂದರ್ಭದಲ್ಲಿ ನಾವು ನಮ್ಮ ಮನಸಿನ ಖಿನ್ನತೆಯನ್ನು ದೂರ ಮಾಡಿಕೊಂಡು ಗಟ್ಟಿಯಾಗಿ ನಿಲ್ಲಬೇಕು.

ನಾವು ನೋವಿನಲ್ಲಿ ಇರುವಾಗ ನಮ್ಮ ಮೂಡ್ ಗಳು ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುತ್ತದೆ. ವಿಚಾರಗಳನ್ನು ಸ್ವೀಕರಿಸುವ ಮನಸ್ಥಿಯನ್ನು ಕಳೆದುಕೊಂಡಿರುವುದರಿಂದ ಸಣ್ಣ ವಿಚಾರಗಳಿಗೆ ಕೋಪ ಮಾಡಿಕೊಳ್ಳುವುದು, ಅಳುವುದು ಹಾಗೂ ಕೆಲಸಗಳಲ್ಲಿ ನಿರಾಸ್ತಿ ಹೊಂದಿರುವುದು ಮಾನಸಿಕ ಖಿನ್ನತೆಗೆ ಮತ್ತಷ್ಟು ಪ್ರಭಾವಬೀರುವುದು.

ಬೇಸರದಲ್ಲಿರುವ ನಮಗೆ ಒಂದಷ್ಟು ಚಟುವಟಿಗಳು ನಮ್ಮ ಮನಸ್ಥೈರ್ಯ ಹೆಚ್ಚಿಸಬಹುದು. ಹಾಗಾದರೆ ಬನ್ನಿ ಯಾವೆಲ್ಲ ಚೆಟನಟಿಕೆಗಳು ನಮ್ಮ ಮನಸನ್ನು ದೃಢಗೊಳಿಸಬಹುದು ಎಂದು ತಿಳಿಯೋಣ..

ಗ್ರಾಟಿಟ್ಯೂಡ್ ಡೈರಿ: ನೀವು ಪ್ರತಿ ನಿತ್ಯ ಮಾಡುವ ಉತ್ತಮ ಕೆಲಸಗಳನ್ನು ಒಂದು ಡೈರಿಯಲ್ಲಿ ಬರೆದಿಡಿ. ಇದರಿಂದ ನಿಮ್ಮಲ್ಲಿ ಪಾಸಿಟಿವ್ ವಿಚಾರಗಳು ಹೆಚ್ಚಾಗುತ್ತದೆ.

ನಿಮ್ಮ ದಿನವನ್ನು ಕಾಫಿಯಿಂದ ಪ್ರಾರಂಭಿಸಿ: ನಿಮ್ಮ ದಿನವನ್ನು ಕಾಫಿ ಅಥವಾ ಟೀ ಸೇವನೆಯಿಂದ ಪ್ರಾರಂಭಿಸಿ. ಇದು ನಿಮ್ಮ ಮೂಡ್ ಬದಲಾಗಲು ಸಹಾಯ ಮಾಡುತ್ತದೆ.

ಟ್ರಿಪ್ ಹೋಗಿ ಬನ್ನಿ: ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಕ್ಯಾಂಪ್ ಅಥವಾ ಟ್ರಿಪ್ ಹೋಗಿ ಬನ್ನಿ. ನಿಮ್ಮ ಮನಸ್ಸು ಇದರಿಂದ ಹಗುರವಾಗುತ್ತದೆ ಹಾಗೂ ನಿಮ್ಮ ಮುಂದಿನ ದಿನಗಳಲ್ಲಿ ಸಂತೋಷದಿಂದ ಇರಲು ಕಾರಣವಾಗುತ್ತದೆ.

ನಿಮ್ಮ ಸಾಮರ್ಥ್ಯ ಗುರುತಿಸಿ:  ನಿಮ್ಮ ಆತ್ಮ ವಿಶ್ವಾಸ ಹೆಚ್ಚಿಸಲು ಹಾಗೂ ನಿಮ್ಮ ಸಾಮರ್ಥ್ಯವನ್ನು ಗರುತಿಸಿಕೊಳ್ಳಲು ಒಂದು ಅವಕಾಶ ನಿಮ್ಮದಾಗಿರುತ್ತದೆ. ಆದರಿಂದ ನೀವು ಕಠಿಣ ಸವಾಲುಗಳನ್ನು ಸ್ವೀಕರಿಸಿ ನಿಮ್ಮ ಮಾನಸಿಕ ಸ್ಥೈರ್ಯ ಹಾಗೂ ಭಲ ವೃದ್ಧಿಸಿಕೊಳ್ಳಿ.

ಸರಿಯಾಗಿ ನಿದ್ದೆ ಮಾಡಿ:  ಉತ್ತಮವಾಗಿ ನಿದ್ದೆ ಮಾಡುವುದರಿಂದ ನಮ್ಮ ಮನಸ್ಸು ಶಾಂತಗೊಂಡು ನಮ್ಮ ಮುಂದಿನ ತೀರ್ಮಾನಗಳಿಗೆ ಮನಸ್ಸು ಸಹಾಯ ಮಾಡುತ್ತದೆ.  

ಮುಂದಿನ ಹೆಜ್ಜೆ ತಿಳಿಯಿರಿ: ನಿಮ್ಮ ಜೀವನ ವೈಖರಿ ಬದಲಾಗಲು ನೀವು ಮುಂದೆ ಯಾವ ಹೆಜ್ಜೆಯನ್ನು ಇಡಬೇಕು ಎಂದುದನ್ನು ತೀರ್ಮಾನಿಸಿ.

ಕ್ರಿಯಾತ್ಮಕವಾಗಿರಿ: ಮನಸ್ಸನ್ನು ಸಮತೋಲನಕ್ಕೆ ತರಲು ಹೊಸ ರೀತಿಯ ಅಡಿಗೆ ರೆಸಿಪಿ ಟ್ರೈ ಮಾಡಿ, ಕವಿತೆ ಬರೆಯಿರಿ, ಚಿತ್ರ ಬಿಡಿಸಿ, ಮನೆಯನ್ನು ಅಲಂಕರಿಸಿ. ನೀವು ಸೃಜನಶೀಲ ವ್ಯಕ್ತಿಗಳಾದರೆ ನಿಮಗೆ ನಕಾರಾತ್ಮಕ ವಿಚಾರಗಳು ಬರುವುದಿಲ್ಲ.

ನಗುತ್ತಿರಿ:  ನಿಮ್ಮ ಮನಸನ್ನು ಹಗುರ ಮಾಡಲು ಇರುವ ಬಹು ಮುಖ್ಯ ಉಪಾಯವೆಂದರೆ ಅದು ನಗು.ನೀವು ನಿಮ್ಮ ಸ್ನೇಹಿತೊಂದಿಗೆ ಸೇರಿ ಒಂದಿಷ್ಟು ನಗಬೇಕು. ಅಥವಾ ಆನ್ ಲೈನ್ ನಲ್ಲಿ ಬರುವ ಕಾಮಿಡಿ ವಿಡಿಯೋ ಗಳನ್ನು ನೋಡಿ ಆನಂದಿಸಿ.

ಡ್ಯಾನ್ಸ್ ಮಾಡಿ: ಮನೆ ಕೆಲಸ, ಆಫೀಸ್ ಕೆಲಸದಿಂದ ಒತ್ತಡದಲ್ಲಿದ್ದರೆ ನಿಮ್ಮ ಫೇವರೇಟ್ ಹಾಡಿಗೆ ಮನೆಯಲ್ಲಿಯೇ ಡ್ಯಾನ್ಸ್ ಮಾಡಿ, ಇದರಿಂದ ನಿಮ್ಮೊಳಗಿರುವ ಸ್ಟ್ರೆಸ್ ಹಾರ್ಮೋನ್ ನ ಒತ್ತಡ ಕಡಿಮೆಯಾಗುತ್ತದೆ.

ವಾಕ್ ಹೋಗಿ: ಪ್ರಕೃತಿ ಮಾತೆಯ ಮಡಿಲಲ್ಲಿ ಕೆಲವು ಕಾಲ ಇದ್ದು ಬನ್ನಿ, ಅಂದರೆ ಪ್ರತಿ ನಿತ್ಯ ನಿಮ್ಮ ಸಮಯವನ್ನು ಪಾರ್ಕ್ ಅಥವಾ ನೀವೆ ಮಾಡಿಕೊಂಡಿರುವ ಗಾರ್ಡನ್ ಗೆ ಭೇಟಿ ನೀಡಿ. ಪ್ರಕೃತಿಯೊಂದಿಗೆ ಒಂದಿಷ್ಟು ಮಾತನಾಡಿ ಬನ್ನಿ. ಇದರಿಂದ ನಿಮ್ಮ ಮನಸ್ಸು ಹಗುರವಾಗುತ್ತದೆ.

ಸೂರ್ಯನ ಕಿರಣ: ಪ್ರತಿದಿನ ಬೆಳಗ್ಗೆ ನಾವು ಸೂರ್ಯನ ಕಿರಣಗಳನ್ನು ಪಡೆಯಬೇಕು. ಇದರಿಂದ ನಮ್ಮ ದೇಹದಲ್ಲಿ ವಿಟಮಿನ್ ಡಿ ಅಂಶ ಹೆಚ್ಚಾಗಿ ನಮ್ಮ ಮೂಡ್ ಎಲಿವೇಟ್ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss