Wednesday, July 6, 2022

Latest Posts

ನಮ್ಮ ಹೆಚ್ಚಿನ ‘ನಕ್ಷತ್ರ’ಗಳು ಈಗ ಮಾಲ್ಡೀವ್ಸ್ ದ್ವೀಪದಿಂದಲೇ ಬೆಳಗುತ್ತಿವೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಅಂದಹಾಗೆ ದೀಪಾವಳಿ ಹಬ್ಬಕ್ಕೆ ನಮ್ಮ ‘ಸ್ಟಾರ್’ಗಳೆಲ್ಲಾ ಎಲ್ಲಿದ್ದಾರೆ?

ಜಗತ್ತು ಕೊರೋನಾ ಹಾವಳಿಯಿಂದ ಚೇತರಿಸಿಕೊಂಡ ಬಳಿಕ ಹೆಚ್ಚಿನ ‘ಸ್ಟಾರ್’ಗಳು ಮಾಲ್ಡಿವ್ಸ್ ವಿಮಾನ ಹತ್ತಿದ್ದಾರೆ.
’ಹಂಗಾಮಾ – ೨’ ಚಿತ್ರೀಕರಣ ಮುಗಿಸಿ ಮಾಲ್ಡೀವ್ಸ್ ಕಡೆಗೆ ಮುಖಮಾಡಿರುವ ಪ್ರಣೀತಾ ಸುಭಾಷ್, ಈ ಬಾರಿಯ ದೀಪಾವಳಿಯನ್ನು ಅಲ್ಲಿಯೇ ಕಳೆಯಲಿದ್ದಾರೆ. ಇನ್ನು ಹೊಸದಾಗಿ ಮದುವೆಯಾಗಿರುವ ಕಾಜಲ್ ಅಗರ್‌ವಾಲ್  ತಮ್ಮ ಪತಿಯ ಜತೆಗೆ ಅದಾಗಲೇ ಅಲ್ಲಿಗೆ ಸೇರಿದ್ದು, ಹನಿಮೂನ್ ಆಚರಿಸಿಕೊಳ್ಳುತ್ತಿದ್ದಾರೆ.

ಟೈಗರ್ ಶ್ರಾಫ್, ವೇದಿಕಾ ಸಹ ಮಾಲ್ಡೀವ್ಸ್ ನಲ್ಲೇ ಇದ್ದಾರೆ.
ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹವಾಲ್ ಕಳೆದ ವಾರವಷ್ಟೇ ಅಲ್ಲಿ ವಿಶ್ರಾಂತಿಗೆಂದು ಹೋಗಿದ್ದರು. ತಾಪ್ಸಿ ಪನ್ನು ತಮ್ಮ ಗೆಳೆತಿಯರ ಜತೆಗೆ ಮಾಲ್ಡೀವ್ಸ್‌ನ ಕಡಲ ಕಿನಾರೆಯಲ್ಲಿ ಫೋಟೋ ತೆಗೆಸಿಕೊಂಡು ಸಾಮಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು.
ಈ ಬಾರಿಯ ದೀಪಾವಳಿಯಲ್ಲಿ ಹೆಚ್ಚಿನ ಸ್ಟಾರ್‌ಗಳು ಈಗ ಮಾಲ್ಡೀವ್ಸ್ ದ್ವೀಪದಿಂದಲೇ ಬೆಳಗುತ್ತಿವೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss