Tuesday, July 5, 2022

Latest Posts

ನಯಾಪೈಸೆ ಕೊಡದ ಸಿದ್ದು : ಕಾರಜೋಳ

ರಾಯಚೂರು: ಕೃಷ್ಣ ಮೇಲ್ದಂಡೆ ನೀರಾವರಿ ಯೋಜನೆ ಹೆಸರಲ್ಲಿ ಸುಳ್ಳು ಹೇಳಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರು. ಪ್ರತಿ ವರ್ಷ 10,000 ಕೋಟಿ ರೂ.ಗಳನ್ನು ಕೊಡುತ್ತೇವೆ ಎಂದು ಕೂಡಲ ಸಂಗಮೇಶ್ವರರ ಮೇಲೆ ಆಣೆ ಮಾಡಿ ನಯಾಪೈಸೆ ಕೊಡಲಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹೊಸಪೇಟೆಯಿಂದ ಕೂಡಲ ಸಂಗಮದವರೆಗೂ ಪಾದಯಾತ್ರೆ ಮಾಡಿದರು. ಕೂಡಲ ಸಂಗಪ್ಪನ ಮೇಲೆ ಸಿದ್ದರಾಮಯ್ಯ ಆಣೆ ಮಾಡಿ ನಯಾಪೈಸೆ ಕೊಡಲಿಲ್ಲ. ಹೀಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಳಂಬವಾಗಿದೆ.

ರಾಜ್ಯಕ್ಕೆ ಹಂಚಿಕೆಯಾದ ಕೃಷ್ಣಾ ನದಿಯ ಹನಿ ನೀರು ಸಹ ಬಳಸಿಕೊಳ್ಳಲು ಆಗಿಲ್ಲ. ರಾಜ್ಯಕ್ಕೆ 173 ಟಿಎಂಸಿ ನೀರು ಬಳಸಿಕೊಳ್ಳಲು ಆಗಿಲ್ಲ. ಈಗ ಈ ಎಲ್ಲ ಕಾಮಗಾರಿಗೆ 51,000 ಕೋಟಿ ರೂ. ಅಗತ್ಯವಿದೆ. ಮುಖ್ಯಮಂತ್ರಿ ಯಡಿಯೂರ ಪ್ಪನವರ ನೇತೃತ್ವದ ಸರ್ಕಾರ ಕೃಷ್ಣಾ ನದಿ ನೀರು ಬಳಕೆಗೆ ಯೊಜನೆ ರೂಪಿಸುತ್ತಿದೆ. ತೆಲಂಗಾಣವು ನದಿ ನೀರು ಹಂಚಿಕೆ ವಿಚಾರವಾಗಿ ಟ್ರಿಬುನಲ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ ಎಂದರು. ಸಿಎಎ ವಿರುದ್ಧದ ಹೋರಾಟದ ಹೆಸರಲ್ಲಿ ದೇಶದ್ರೋಹದ ಘೋಷಣೆ ಕೂಗುವುದನ್ನು ಸಹಿಸಲ್ಲ. ಯಾರೇ ಇದ್ದರೂ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss