Sunday, August 14, 2022

Latest Posts

ನರಿ ಬುದ್ದಿಯ ಚೀನಾಗೆ ಮೊದಲ ಗುದ್ದು: 471 ಕೋಟಿ ರೂ. ಯೋಜನೆ ರದ್ದುಪಡಿಸಿದ ಭಾರತೀಯ ರೈಲ್ವೆ!

ನವದೆಹಲಿ: ನಮ್ಮ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ 24 ತಾಸು ಕಳೆವ ಮೊದಲೇ ರೈಲ್ವೆ ಇಲಾಖೆ ಚೀನಾಗೆ ಸಖತ್ ಗುದ್ದು ನೀಡಿದೆ. ಕೇಂದ್ರ ಸರ್ಕಾರ ಚೀನಾ ಕಂಪನಿಗೆ ನೀಡಿದ್ದ 471 ಕೋಟಿ ರುಪಾಯಿ ವೆಚ್ಚದ ರೈಲ್ವೆ ಯೋಜನೆಯನ್ನು ರದ್ದುಪಡಿಸಲಾಗಿದೆ.
ಕಾನ್ಪುರ್-ದೀನ್ ದಯಾಳ್ ಉಪಾಧ್ಯಾಯ ವಿಭಾಗದಲ್ಲಿ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಕಲ್ಪಿಸುವ ಬಗ್ಗೆ ಬೀಜಿಂಗ್ ನ್ಯಾಷನಲ್ ರೈಲ್ವೆ ರಿಸರ್ಚ್ ಅಂಡ್ ಡಿಸೈನ್ ಇನ್ಸಿಟ್ಯೂಷನ್ ಆಫ್ ಸಿಗ್ನಲ್ ಅಂಡ್ ಕಮ್ಯೂನಿಕೇಷನ್ ಗ್ರೂಪ್ ಕಂಪನಿಗೆ ಜೂನ್ 2016ರಲ್ಲಿ ಗುತ್ತಿಗೆ ನೀಡಲಾಗಿತ್ತು. ನಾಲ್ಕು ವರ್ಷದಲ್ಲಿ ಕೇವಲ 20ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದ್ದು ಕಳಪೆ ಸಾಧನೆ ಎಂಬ ಕಾರಣ ನೀಡಿ ಒಪ್ಪಂದವನ್ನು ಕೇಂದ್ರ ರೈಲ್ವೆ ಸಚಿವಾಲಯ ರದ್ದು ಮಾಡಿದೆ. ಬರೋಬ್ಬರಿ 471 ಕೋಟಿ ರುಪಾಯಿ ವೆಚ್ಚದ ರೈಲ್ವೆ ಯೋಜನೆ ಇದಾಗಿತ್ತು. ಅಲ್ಲದೆ ವಿಶ್ವಬ್ಯಾಂಕ್ ನಿಂದ 471 ಕೋಟಿ ರುಪಾಯಿ ಸಾಲ ಪಡೆದು ಈ ಗುತ್ತಿಗೆ ನೀಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss