Thursday, August 11, 2022

Latest Posts

ನರೇಂದ್ರ ಮೋದಿ ಹುಟ್ಟುಹಬ್ಬ ಪ್ರಯುಕ್ತ ಮಂಜೇಶ್ವರದಲ್ಲಿ ಬಿಜೆಪಿ ಓಬಿಸಿ ಮೋರ್ಚಾದಿಂದ ಹಿರಿಯರಿಗೆ ಗೌರವಾರ್ಪಣೆ

ಕಾಸರಗೋಡು: ಭಾರತದ ಶ್ರೇಷ್ಠ ಹಾಗೂ ಜನಪ್ರಿಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 70 ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ ಕೇರಳ ರಾಜ್ಯವ್ಯಾಪಿಯಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಸಮಾಜದಲ್ಲಿ‌ ಸಾಧನೆಗಳೊಂದಿಗೆ ಗುರುತಿಸಲ್ಪಟ್ಟ 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.
ಇದರ ಅಂಗವಾಗಿ ಬಿಜೆಪಿ ಓಬಿಸಿ ಮೋರ್ಚಾದ ವತಿಯಿಂದ ಮಂಗಲ್ಪಾಡಿ ಪಂಚಾಯತ್ ನ ಉಪ್ಪಳದ ಸಮಾಜಸೇವಕರಾದ ಯು.ಜಯರಾಮ – ಭವಾನಿ ದಂಪತಿಯನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಓಬಿಸಿ ಮೋರ್ಚಾದ ರಾಜ್ಯ ಕೋಶಾಧಿಕಾರಿ, ನ್ಯಾಯವಾದಿ ನವೀನ್ ರಾಜ್ ಕೆ.ಜೆ. ಶಾಲು ಹೊದಿಸಿದರು. ಓಬಿಸಿ ಮೋರ್ಚಾದ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಕೆ. ಐಲ್ ಫಲಪುಷ್ಪ ನೀಡಿದರು. ಓಬಿಸಿ ಮೋರ್ಚಾದ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಹಾಸ ಪೂಜಾರಿ ಕಡಂಬಾರು, ಸದಸ್ಯರಾದ ಚಂದ್ರಹಾಸ ವಳಚ್ಚಲ್ ಬಂದ್ಯೋಡು, ಸುಕೇಶ್ ಬೆಜ್ಜ ಮೊದಲಾದವರು ಉಪಸ್ಥಿತರಿದ್ದರು.
ಕಡಂಬಾರಿನಲ್ಲಿ ನಾಟಿ ವೈದ್ಯೆ ಕಮಲಾ ಪೂಜಾರ್ತಿಗೆ ಸನ್ಮಾನ
ಪ್ರಸಿದ್ಧ ಪರಂಪರಾಗತ ನಾಟಿ ವೈದ್ಯೆಯಾದ ಕಡಂಬಾರು ಭಂಡಾರ ಮನೆಯ ಕಮಲಾ ಪೂಜಾರ್ತಿ ಅವರನ್ನು
ಮೋದಿಜೀಯವರ 70 ನೇ ಹುಟ್ಟುಹಬ್ಬ ಸಂಭ್ರಮದ ಅಂಗವಾಗಿ ಬಿಜೆಪಿ ಓಬಿಸಿ ಮೋರ್ಚಾದ ಮೀಂಜ ಪಂಚಾಯತ್ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಬಿಜೆಪಿ ಪಂಚಾಯತ್ ಸಮಿತಿಯ ಅಧ್ಯಕ್ಷ ಕೃಷ್ಣ ಬೆಜ್ಜ ಕೊಲಂಜ, ಓಬಿಸಿ ಮೋರ್ಚಾದ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಹಾಸ ಪೂಜಾರಿ ಕಡಂಬಾರು, ಮಂಡಲ ಸಮಿತಿಯ ಸದಸ್ಯ ಸುಕೇಶ್ ಬೆಜ್ಜ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss