ಬಾಗಲಕೋಟೆ: ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ವರ್ಡ ನರ್ಸಿಂಗ್ ಆಪೀಸರ್ಸ್ ಡೇ ಆಚರಣೆ ಮಾಡಲಾಯಿತು. ಕೊರೊನಾ ವಾರಿಯರ್ಸ ಬಿರುದಿಗೆ ಪಾತ್ರರಾದ ಜಿಲ್ಲಾ ಆಸ್ಪತ್ರೆಯ ನರ್ಸಗಳಿಗೆ ಪುಷ್ಪಾರ್ಚನೆಗೈದು ಗೌರವ ಸಲ್ಲಿಕೆಮಾಡಲಾಯಿತು.
ಇದೇ ಸಂದರ್ಬದಲ್ಲಿ ಕೋವಿಡ್ ನಿಂದ ಗುಣಮುಖರಾದ ಜಮಖಂಡಿಯ 6 ಜನ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಯಾದರು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾದ್ಯಮ ಹೇಳಿಕೆ ನೀಡಿದ್ದಾರೆ.
ಜಮಖಂಡಿಯ 46 ವರ್ಷದ ಪುರುಷ ಪಿ.456, 32 ವರ್ಷದ ಮಹಿಳೆ ಪಿ.508, 21 ವರ್ಷದ ಮಹಿಳೆ ಪಿ.509, 22 ವರ್ಷದ ಪುರುಷ ಪಿ.523, 11 ವರ್ಷದ ಬಾಲಕ ಪಿ.522, 20 ವರ್ಷದ ಮಹಿಳೆ ಪಿ.521 ಕೋವಿಡ್ ನಿಂದ ಗುಣಮುಖರಾಗಿದ್ದಾರೆ.
ಕೋವಿಡ್ ನಿಂದ ಗುಣಮುಖರಾದವರಿಗೆ ಪ್ರಮಾಣ ಪತ್ರವನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ವಿತರಿಸಿದರು.