Saturday, July 2, 2022

Latest Posts

ನವೆಂಬರ್ 16 ರಿಂದ ಭಕ್ತರ ದರುಶನಕ್ಕೆ ತೆರೆದುಕೊಳ್ಳಲಿದೆ ಶಿರಡಿ ಸಾಯಿಬಾಬಾ ದೇವಾಲಯ

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ಕೊರೋನಾ ಲಾಕ್ ಡೌನ್ ಯಿಂದ ಕಳೆದ ಹಲವು ತಿಂಗಳಿಂದ ಬಂದ್ ಆಗಿದ್ದ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಾಲಯವು ನವೆಂಬರ್ 16 ರಿಂದ ಭಕ್ತರ ದರುಶನಕ್ಕೆ ಮುಕ್ತವಾಗಲಿದೆ.
ಮಹಾರಾಷ್ಟ್ರ ಸರ್ಕಾರ ಕೂಡ ಈಗಾಗಲೇ ಕೋರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆ ಧಾರ್ಮಿಕ ಕ್ಷೇತ್ರಗಳ, ದೇವಾಲಯಗಳನ್ನುಯ ತೆರೆಯಲು ಅನುಮತಿ ನೀಡಿದ್ದು, ನಾಳೆಯಿಂದ ಶಿರಡಿ ದೇವಾಲಯ ಓಪನ್ ಆಗಲಿದೆ.
ಮಾರ್ಗಸೂಚಿ ಕಡ್ಡಾಯ:

  • ಫೇಸ್ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ.
  • ದಿನವೊಂದಕ್ಕೆ 6,000 ಭಕ್ತರಿಗಷ್ಟೇ ದರುಶನಕ್ಕೆ ಅವಕಾಶ.
  • ದೇವಾಲಯಕ್ಕೆ ಬರುವ ಭಕ್ತರು ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
  • ದರುಶನಕ್ಕೆ ಬರುವ ಭಕ್ತರು ಆರ್ ಸಿ ಪಿಸಿ ಆರ್ ಪರೀಕ್ಷೆಯ ವರದಿ ತರಬೇಕು.

    ಒಟ್ಟಿನಲ್ಲಿ ಕೊರೋನಾ ಭೀತಿಯ ನಡುವೆ ಮಹಾರಾಷ್ಟ್ರದಾದ್ಯಂತ ನಾಳೆಯಿಂದ ಬಹುತೇಕ ಧಾರ್ಮಿಕ ಸ್ಥಳಗಳು ಪ್ರವೇಶಕ್ಕೆ ಮುಕ್ತವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss