Saturday, August 13, 2022

Latest Posts

ನಾಗಮಂಗಲ| ಗಾಂಜಾ ಸೊಪ್ಪು ಮಾರುತ್ತಿದ್ದ ಮೂವರ ಬಂಧನ: 2.5 ಕೆ.ಜಿ. ಗಾಂಜಾ ವಶಕ್ಕೆ

ನಾಗಮಂಗಲ : ಪಟ್ಟಣದ ಮೈಸೂರು ರಸ್ತೆಯ ಜಮೀನೊಂದರಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಪಟ್ಟಣ ಠಾಣೆಯ ಪೊಲೀಸರು, ಆರೋಪಿಗಳಿಂದ 75 ಸಾವಿರ ರೂ. ಬೆಲೆ ಬಾಳುವ 2.5ಕೆ.ಜಿ. ಗಾಂಜಾ ಸೊಪ್ಪು, 1900 ನಗದು ಸೇರಿದಂತೆ ಮೂರು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಮೈಸೂರು ರಸ್ತೆಯ ರಹಮತ್‍ನಗರದ ಚಿಲ್ಲರೆ ಅಂಗಡಿ ವ್ಯಾಪಾರಿ ಇಮ್ರಾನ್‍ಖಾನ್, ಕುಂಬಾರ ಬೀದಿಯ ಬಟ್ಟೆ ವ್ಯಾಪಾರಿ ಸಯ್ಯದ್ ಅಜರ್ ಹಾಗೂ ಮೈಸೂರಿನ ರಾಜೀವ್‍ನಗರದ ವಾಸಿ ಮಹಮ್ಮದ್ ಜುಹೇದ್ ಬಂಧಿತ ಆರೋಪಿಗಳು.
ಪಟ್ಟಣದ ಮೈಸೂರು ರಸ್ತೆಯ ಜಾವದ್‍ಪಾಷರವರ ಜಮೀನಿನಲ್ಲಿ ಇಮ್ರಾನ್‍ಖಾನ್ ಎಂಬುವರು ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಜಿಲ್ಲಾ ಎಸ್ಪಿ ಕೆ.ಪರಶುರಾಮ್, ಎಎಸ್‍ಪಿ ಧನಂಜಯ, ಡಿವೈಎಸ್‍ಪಿ ಕೆ.ಬಿ.ವಿಶ್ವನಾಥ್ ಹಾಗೂ ಸಿಪಿಐ ಕೆ.ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‍ಐ ರವಿಕಿರಣ್ ಹಾಗೂ ಪ್ರೊಬೆಷನರಿ ಪಿಎಸ್‍ಐ ಸಿದ್ದರಾಜು ನೇತೃತ್ವದ ಪೊಲೀಸರ ತಂಡ ಇಮ್ರಾನ್‍ಖಾನ್ ಸೇರಿದಂತೆ ಮೂವರನ್ನು ಬಂಧಿಸಿ, ತಾಪಂ ಇಓ ಎಂ.ಆರ್.ಅನಂತರಾಜು ಅವರಿಂದ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss