Tuesday, July 5, 2022

Latest Posts

ನಾಗರಿಕ ಸಹಾಯವಾಣಿ ಕೇಂದ್ರ ಮುಚ್ಚುತ್ತಿರುವ ಬಗ್ಗೆ ಪುನರ್ ಪರಿಶೀಲನೆಗೆ ಒತ್ತಾಯಿಸಿ ಶಾಸಕರಿಗೆ ಮನವಿ

ಹೊಸ ದಿಗಂತ ವರದಿ, ಶಿವಮೊಗ್ಗ :

ಸರ್ಕಾರಿ ಆಸ್ಪತ್ರೆಯಲ್ಲಿರುವ ನಾಗರೀಕ ಸಹಾಯವಾಣಿ ಕೇಂದ್ರವನ್ನು ಏಕಾಏಕಿ ಮುಚ್ಚುತ್ತಿರುವ ಕ್ರಮವನ್ನು ಪುನರ್
ಪರಿಶೀಲಿಸುವಂತೆ ಒತ್ತಾಯಿಸಿ ಬುಧವಾರ ಸಾಗರ ಆರೋಗ್ಯ ಇಲಾಖೆ ನೌಕರರ ಸಂಘದ ತಾಲೂಕು ಶಾಖೆ ಮೂಲಕ ಸಹಾಯವಾಣಿ ನೌಕರರು ಶಾಸಕರಿಗೆ ಮನವಿ ಸಲ್ಲಿಸಿದರು.
2017 ಮಾರ್ಚ್ 6ರಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ನಾಗರೀಕ ಸಹಾಯವಾಣಿ ಕೇಂದ್ರವನ್ನು ರಾಜ್ಯದ 50 ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಶಿಕಾರಿಪುರ ಆಸ್ಪತ್ರೆಯಲ್ಲಿ ನಾಗರೀಕ ಸಹಾಯವಾಣಿ ಕೇಂದ್ರ ಅತ್ಯಂತ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಮಾರ್ಚ್ ತಿಂಗಳಿನಿಂದ ನಾಗರೀಕ ಸಹಾಯವಾಣಿ ಕೇಂದ್ರಗಳನ್ನು ಮುಚ್ಚುವ ಅಧಿಕೃತ ಜ್ಞಾಪನಾ ಹೊರಡಿಸಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಾಗರೀಕ ಸಹಾಯವಾಣಿ ಕೇಂದ್ರದ ಮೂಲಕ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಸೇವೆಗಳನ್ನು ರೋಗಿಗಳಿಗೆ ಮತ್ತು ಸಹಾಯಕರಿಗೆ ನೀಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಲಭ್ಯವಿರುವ ಉಚಿತ ಸೇವೆಗಳು, ಶುಲ್ಕಭರಿತ ಸೇವೆಗಳು, ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆಯನ್ನು ರೋಗಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಆಡಳಿತಾಧಿಕಾರಿಗಳು ಸಿಬ್ಬಂದಿಗಳ ಜೊತೆ ಚರ್ಚಿಸುವುದು, ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳ ಮಧ್ಯ ಸಂಘರ್ಷಣೆಯಾಗದಂತೆ ಉತ್ತಮ ಬಾಂಧವ್ಯ ರೂಪಿಸುವುದು ಇನ್ನಿತರೆ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss