March 11, 2026
Wednesday, March 11, 2026
spot_img

ನಾಚಿಕೆ ಎಂದರೇನು ಗೊತ್ತೆ? ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದವೇ ನಾಚಿಕೆಗೇಡು: ಮೋದಿ ವಿರುದ್ಧ ರಾಹುಲ್ ಕಿಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿಯವರೇ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ದೆಹಲಿಯಲ್ಲಿ ಇತ್ತೀಚೆಗೆ ನಡೆದ AI ಇಂಪ್ಯಾಕ್ಟ್ ಸಮ್ಮೇಳನದ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಯನ್ನು ಪ್ರಧಾನಿ ಮೋದಿ “ಕೀಳು ಮಟ್ಟದ ನಾಚಿಕೆಗೇಡಿನ ರಾಜಕೀಯ” ಎಂದು ಟೀಕಿಸಿದ್ದರು.

ಇದಕ್ಕೆ ವೀಡಿಯೋ ಸಂದೇಶದಲ್ಲಿ ಪ್ರತಿಕ್ರಿಯಿಸಿದ ರಾಹುಲ್, ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದವು ದೇಶದ ಹಿತಾಸಕ್ತಿಗಳಿಗೆ ದ್ರೋಹವಾಗಿದೆ ಎಂಬ ಕರೆದಿದ್ದಾರೆ.

ಅಮೆರಿಕದೊಂದಿಗೆ ವ್ಯಾಪಾರ ಮಾಡುವ ಮೂಲಕ ನೀವು ದೇಶವನ್ನು ಮಾರಿದ್ದೀರಿ. ಅದು ನಾಚಿಕೆಗೇಡಿನ ಸಂಗತಿ ಎಂದರು.

ನಾಚಿಕೆ ಬಗ್ಗೆ ನೀವು ಮಾತನಾಡುತ್ತೀರಾ? ನಾಚಿಕೆ ಎಂದರೇನು ಎಂಬುದನ್ನು ನಾನು ಹೇಳುತ್ತೇನೆ ಎಂದು ಕೇಳಿ, ದೇಶದ ಡೇಟಾವನ್ನು ಒಪ್ಪಿಸಿದ್ದೀರಿ. ರೈತರನ್ನು ನಾಶಮಾಡಿದ್ದೀರಿ. ವಸ್ತ್ರೋದ್ಯಮವನ್ನು ಹಾಳು ಮಾಡಿದ್ದೀರಿ, ಅದುವೇ ನಾಚಿಕೆಗೇಡಿನದ್ದು ಎಂದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರೇ, ನಿಮ್ಮ ಪ್ರಧಾನಮಂತ್ರಿಯ ಕಣ್ಣಿನಲ್ಲಿ ನೋಡಿ, ನಿಮಗೆ ಅವರ ಕಣ್ಣುಗಳಲ್ಲಿ ಭಯ ಕಾಣಿಸುತ್ತದೆ. ಅವರು ಸಂಸತ್ತಿಗೂ ಬರಲಿಲ್ಲ ಎಂದರು.

ಈ ದೇಶದ ಪ್ರಧಾನಮಂತ್ರಿಯ ಕಂಠವನ್ನು ಅಮೆರಿಕ ಹಿಡಿದಿದೆ; ಅವರು ಭಾರತವನ್ನು ಒತ್ತಡಕ್ಕೆ ಒಳಪಡಿಸಿ ಮಾರಿದ್ದಾರೆ. ಅಮೆರಿಕದಲ್ಲಿ ಅದಾನಿ ವಿರುದ್ಧ ನಡೆಯುತ್ತಿರುವ ಪ್ರಕರಣವು ಬಿಜೆಪಿ ಮತ್ತು ಅದರ ಹಣಕಾಸು ವ್ಯವಸ್ಥೆಯ ಮೇಲೆ ಪರಿಣಾಮ ಬೀರಿರುವುದರಿಂದ ನಿಮ್ಮ ನಿದ್ದೆ ಹಾರಿಹೋಗಿದೆ ಎಂದರು.

ಅಹಿಂಸೆ ಮತ್ತು ಭಿನ್ನಾಭಿಪ್ರಾಯಗಳು ಭಾರತದ ಪ್ರಜಾಪ್ರಭುತ್ವದ ಅವಿಭಾಜ್ಯ ಭಾಗವಾಗಿವೆ . ಈ ದಾರಿ ಗಾಂಧೀಜಿ ಮತ್ತು ಭಗತ್ ಸಿಂಗ್ ತೋರಿಸಿದದ್ದು. ಇದಕ್ಕೆ ನೀವು ಏಕೆ ಭಯಪಡುತ್ತೀರಿ ಎಂದು ಪ್ರಶ್ನಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !